ಉತ್ತರ ಕೊರಿಯಾಕ್ಕೆ ಮೂನ್‌ಗೆ ಆಹ್ವಾನ

7

ಉತ್ತರ ಕೊರಿಯಾಕ್ಕೆ ಮೂನ್‌ಗೆ ಆಹ್ವಾನ

Published:
Updated:

ಸೋಲ್‌: ತಮ್ಮ ದೇಶಕ್ಕೆ ಭೇಟಿ ನೀಡುವಂತೆ ಅಧ್ಯಕ್ಷ ಮೂನ್‌ ಜಾಯಿ–ಇನ್‌ ಅವರಿಗೆ ಉತ್ತರ ಕೋರಿಯಾದ ನಾಯಕ ಕಿಮ್‌ ಉನ್‌ ಜಂಗ್‌ ಅವರು ಆಹ್ವಾನ ನೀಡಿದ್ದಾರೆ ಎಂದು ಮೂನ್‌ ಅವರ ಕಚೇರಿ ಶನಿವಾರ ತಿಳಿಸಿದೆ.

ಸೌಹಾರ್ದಯುತ ವಾತಾವರಣಕ್ಕೆ ಎರಡೂ ದೇಶಗಳು ಒಂದಾಗಬೇಕು ಎಂದು ಮೂನ್‌ ಹೇಳಿದ್ದಾರೆ ಎಂದು ವಕ್ತಾರರೊಬ್ಬರು ಹೇಳಿದ್ದಾರೆ.

ಕಿಮ್‌ ಜಾಂಗ್‌ ಉನ್‌ ಅವರ ಸಹೋದರಿ, ಸಲಹೆಗಾರ್ತಿ ಕಿಮ್‌ ಯೊ ಜಾಂಗ್‌ ಅವರು ಶನಿವಾರ ಇಲ್ಲಿನ ಅಧ್ಯಕ್ಷರ ಭವನದಲ್ಲಿ ಮೂನ್‌ ಅವರನ್ನು ಭೇಟಿಯಾಗಿ  ಆಹ್ವಾನ ನೀಡಿದ್ದಾರೆ.

ಈ ಬೆಳವಣಿಗೆ ಎರಡೂ ದೇಶಗಳ ನಡುವಿನ ವೈಷಮ್ಯವನ್ನು ತಗ್ಗಿಸುವ ನಿರೀಕ್ಷೆ ಹುಟ್ಟಿಹಾಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry