ಸೋಮವಾರ, ಡಿಸೆಂಬರ್ 9, 2019
22 °C

ಮಾನಪ್ಪ, ಶಿವರಾಜ್‌ಗೆ ಟಿಕೆಟ್‌: ಬಿಎಸ್‌ವೈ ಘೋಷಣೆ

Published:
Updated:
ಮಾನಪ್ಪ, ಶಿವರಾಜ್‌ಗೆ ಟಿಕೆಟ್‌: ಬಿಎಸ್‌ವೈ ಘೋಷಣೆ

ಲಿಂಗಸುಗೂರು (ರಾಯಚೂರು ಜಿಲ್ಲೆ): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಯಚೂರು ನಗರ ಹಾಗೂ ಲಿಂಗಸುಗೂರು ಕ್ಷೇತ್ರಗಳಿಗೆ ಕ್ರಮವಾಗಿ ಡಾ.ಶಿವರಾಜ ಪಾಟೀಲ, ಮಾನಪ್ಪ ವಜ್ಜಲ ಅವರಿಗೆ ಟಿಕೆಟ್‌ ನೀಡುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಘೋಷಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ’ಈ ಚುನಾವಣೆಯಲ್ಲಿ ಆಕಾಂಕ್ಷಿಗಳ ಸಾಮರ್ಥ್ಯವನ್ನು ಆಧರಿಸಿ ಟಿಕೆಟ್‌ ನೀಡುತ್ತೇವೆ. ಪಕ್ಷ ಬಲವರ್ಧನೆಗೆ ದುಡಿದ ಮುಖಂಡರನ್ನು ಗುರುತಿಸಿ, ಆಡಳಿತಕ್ಕೆ ಬಂದ ತಕ್ಷಣ ಅವರಿಗೆ ಸೂಕ್ತ ಸ್ಥಾನಮಾನ ನೀಡುತ್ತೇವೆ’ ಎಂದು ಹೇಳಿದರು.

‘ನಮ್ಮನ್ನು ಜೈಲಿಗೆ ಹೋಗಿ ಬಂದವರು ಎಂದು ಗೇಲಿ ಮಾಡುತ್ತಿದ್ದವರು ಈಗ ಜೈಲಿಗೆ ಹೋಗಿ ಬಂದ ಶಾಸಕರುಗಳನ್ನೇ ಬಳ್ಳಾರಿಯಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ. ಇದು ಅವರ ಅಸಹಾಯಕತೆಯನ್ನು ದೃಢಪಡಿಸುತ್ತದೆ’ ಎಂದು ಟೀಕಿಸಿದರು.

‘ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಕಾಂಗ್ರೆಸ್‌ ನಾಯಕಿ ಸೋನಿಯಾಗಾಂಧಿ ಅವರು ಪ್ರವಾಸ ಮಾಡಿದ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕರ್ನಾಟಕ ಸಹ ಕಾಂಗ್ರೆಸ್‌ ಮುಕ್ತ ರಾಜ್ಯವಾಗಲಿದೆ’ ಎಂದರು.

**

ರಾಹುಲ್‌ ಗಾಂಧಿ  ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಪ್ರವಾಸ ಕೈಗೊಳ್ಳುತ್ತಿರುವುದನ್ನು ಸ್ವಾಗತಿಸುತ್ತೇವೆ. ಅವರು ಪ್ರವಾಸ ಮಾಡಿದ ಕಡೆ ಕಾಂಗ್ರೆಸ್‌ ನಿರ್ನಾಮ ಆಗುತ್ತಿರುವುದಕ್ಕೆ 19 ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಯುತ್ತಿರುವುದೇ ಸಾಕ್ಷಿ. ಅವರ ಬರುವಿಕೆ ಬಿಜೆಪಿಗೆ ಶುಭ ಸಂಕೇತ.

–ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಪ್ರತಿಕ್ರಿಯಿಸಿ (+)