ಬುಧವಾರ, ಡಿಸೆಂಬರ್ 11, 2019
23 °C

ಕಲಾದಗಿ: ವೈಭವದ ನೂರ್ ಅಲಿ ಉರುಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಾದಗಿ: ವೈಭವದ ನೂರ್ ಅಲಿ ಉರುಸ್

ಕಲಾದಗಿ: ಹಿಂದೂ– ಮುಸ್ಲಿಮರ ಭಾವೈಕ್ಯೆತೆಯ ದ್ಯೋತಕವಾದ ಇಲ್ಲಿನ ಸೂಫಿ ಸಂತ ಹಜರತ್ ನೂರ್ ಅಲಿ ಶಹಾ ಬಾಬಾ ಅವರ 76ನೇ ಉರುಸ್‌ ಶನಿವಾರ ವಿಜೃಂಭಣೆಯಿಂದ ಜರುಗಿತು.

ಭಕ್ತರು ದೇವರಿಗೆ ಊದಬತ್ತಿ, ಸುಗಂಧದ್ರವ್ಯ, ಲೋಬಾನ, ಸಕ್ಕರೆ, ಮಾದಲಿ ಸೇರಿದಂತೆ ಇತರೆ ನೈವೇದ್ಯಗಳನ್ನು ಅರ್ಪಿಸಿದರು. ಹಿಂದೂ– ಮುಸ್ಲಿಮರು ಸೇರಿ ದೇವರನ್ನು ನೆನೆದು ಭಕ್ತಿ ಮೆರೆದರು.

ಬೆಳಿಗ್ಗೆಯಿಂದಲೇ ದರ್ಗಾದಲ್ಲಿ ಪೂಜಾ ವಿಧಿ ವಿಧಾನಗಳು ಜರುಗಿದವು. ಬಾಬಾರವರ ಕತೃಗದ್ದುಗೆಗೆ ಹೂವಿನಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಆವರಣದಲ್ಲಿ ಮಧ್ಯಾಹ್ನ ಅನ್ನ ಸಂತರ್ಪಣೆ ಜರುಗಿತು. ಭಕ್ತರಿಂದ ನೂರ್ ಅಲಿ ಶಹಾ ಬಾಬಾ ಕಿ ದೋಸ್ತರ ಹೋ ದಿನ್ ಎನ್ನುವ ಜಯ ಘೋಷ ಮೊಳಗಿತು.

ಉರುಸ್‌ನ ನೇತೃತ್ವವನ್ನು ಮಾಹಾಂತಪ್ಪ ಅಂಗಡಿ, ಡಾ.ಕೆ ಎಂ. ಬೆಳಗಾವಿ, ಬಸಪ್ಪ ಹೂಗಾರ, ಹಾಜೀ ರಫೀಕ್ ಅಹ್ಮದ್ ಬೇಪಾರಿ, ಇಸ್ಮಾಯಿಲ್ ಸೈಯದ್, ಅಮೀರ್ ಮಜಾ ಜಮಾದಾರ್, ಸಲೀಂ ಬೇಪಾರಿ, ಬಕ್ಷು ಬಸ್ತವಾಡ, ರಫೀಕ್ ಬಾಗವಾನ, ಮನಸೂರ್ ಮುಲ್ಲಾ ಸೇರಿದಂತೆ ಮತ್ತಿತರರು ಇದ್ದರು.

ಪ್ರತಿಕ್ರಿಯಿಸಿ (+)