ಶುಕ್ರವಾರ, ಡಿಸೆಂಬರ್ 13, 2019
27 °C
ರೈತರಿಗೆ ವರದಾನವಾದ ಸರ್ಕಾರದ ಯೋಜನೆ

ಬರಡು ಭೂಮಿಗೆ ಹಸಿರು ಹೊದಿಸಿದ ಕೃಷಿಹೊಂಡ

ಸದಾಶಿವ ಮಿರಜಕರ . Updated:

ಅಕ್ಷರ ಗಾತ್ರ : | |

ಬರಡು ಭೂಮಿಗೆ ಹಸಿರು ಹೊದಿಸಿದ ಕೃಷಿಹೊಂಡ

ಸವದತ್ತಿ: ಸತತ ಬರಗಾಲದಿಂದ ಕಂಗಾಲಾದ ರೈತರಿಗೆ ಸರ್ಕಾರ ಜಾರಿಗೆ ತಂದ ಕೃಷಿಹೊಂಡ ಯೋಜನೆ ವರ ದಾನವಾಗಿದೆ. ಇದು ಕೃಷಿ ಕರ ಆರ್ಥಿಕ ಭದ್ರತೆಗೆ ಆತ್ಮವಿಶ್ವಾಸ ಹುಟ್ಟಿ ಸಿದೆ.

ಕಳೆದ ಮೂರು ದಶಕದಿಂದ ಕೃಷಿ ಮಾಡುತ್ತಿದ್ದ ಹಿರೇಉಳ್ಳಿಗೇರಿ ರೈತ ವಿರೂಪಾಕ್ಷಿ ತೆಗ್ಗಿ ಅವರು ಅವರಿವರ ಸಲಹೆಯಂತೆ ತಮ್ಮ ಹೊಲದಲ್ಲಿ 30 ಮೀಟರ್‌ ಅಳತೆಯ ಕೃಷಿಹೊಂಡ ನಿರ್ಮಿಸಿಕೊಂಡರು. ಮಳೆಯಿಂದ ಅದು ತುಂಬಿತು.

‘ಕಳೆದ ಮುಂಗಾರು ಸಂಪೂರ್ಣ ವಿಫಲವಾಗಿತ್ತು. ಹಿಂಗಾರಿ ಹಂಗಾಮಿನಲ್ಲಿ n ಅನುಭಾವಿಗಳ ಸಲಹೆಯಂತೆ 1 ಎಕರೆಯಲ್ಲಿ ಕಲ್ಲಂಗಡಿ ಬೀಜ ಬಿತ್ತಿ ದ್ದೆವು. ಉಳಿದ ಭೂಮಿಯಲ್ಲಿ ಜೋಳ ಹಾಗೂ ಮೆಂತೆ ಜತೆಗೆ ಸಮ್ಮಿಶ್ರ ಬೆಳೆ ಹಾಕಿದ್ದೆವು. ಕಲ್ಲಂಗಡಿ ಕೈಹಿಡಿದು ₹35 ಸಾವಿರ ಆದಾಯ ತಂದುಕೊಟ್ಟಿದೆ, ಇನ್ನೂ ₹30 ಸಾವಿರ ದೊರಕುವ ಅಂದಾಜು ಇದೆ’ ಎಂದು ವಿರೂಪಾಕ್ಷಿ ತೇಗಿ ಹೇಳಿದರು.

‘ಉಳಿದ ಭೂಮಿಯಲ್ಲಿ ಜೋಳ ಆಹಾರ ಧಾನ್ಯ ಬೆಳೆಯಲಾಗಿದೆ. ನಮಗೂ ಜಾನುವಾರುಗಳಿಗೂ ವರ್ಷ ಇಡೀ ಅನ್ನವಾಗಿದೆ’ ಎನ್ನುತ್ತಾರೆ ಅವರು.

‘5 ಎಕರೆಗೆ ಅಗತ್ಯ ಸಂದ ರ್ಭದಲ್ಲಿ ಎರಡು ಸಲ ನೀರು ಹಾಯಿಸಲಾಗಿತ್ತು. ಬೇಕೆನಿಸಿದರೆ ಎರಡು ಎಕರೆಗೆ ಇನ್ನೂಮ್ಮೆ ಹಾಯಿಸುವಷ್ಟು ನೀರು ಕೃಷಿ ಹೊಂಡಲದಲ್ಲಿದೆ. ಕುಡಿ ಯಲು ಸಹ ಅನುಕೂಲವಾಗಿದೆ’ ಎಂದು ಅಲ್ಲಿನ ರೈತ ಧರ್ಮೇಂದ್ರ ತುರಾಯಿ ಹೇಳಿದರು.

ಇದೇ ಗ್ರಾಮದ ಹಿರಿಯರಾದ ನೀಲಪ್ಪ ಸುಣಗಾರ ಕೃಷಿಹೊಂಡ ನಿರ್ಮಿಸಿಕೊಂಡ ಪ್ರಥಮ ರೈತರು. ಈ ಭಾಗದಲ್ಲಿ ಅವರ ಒಕ್ಕಲುತನ ಮಾದರಿಯಾಗಿದೆ. ಅದನ್ನು ಗಮನಿಸಿ ಸುಮಾರು 95 ಜನರ ಹೊಲದಲ್ಲಿ ಕೃಷಿ ಹೊಂಡಗಳು ನಿರ್ಮಾಣವಾಗಿವೆ, ಇವರಿಗೆ ಕೃಷಿ ಅಧಿಕಾರಿ ಕೆ.ಎಲ್‌. ಪಾಟೀಲ ಮಾರ್ಗದರ್ಶನ ನೀಡಿದ್ದಾರೆ.

ತಾಲ್ಲೂಕಿನಲ್ಲಿ ಯೋಜನೆ ಚರ್ಚಿತವಾಗಿದೆ. 5 ಸಾವಿರ ರೈತರು ಲಾಭ ಪಡೆದಿದ್ದಾರೆ. ಮತ್ತೆ ಸಾವಿರಾರು ರೈತರು ತಮ್ಮ ಹೊಲಗಳಲ್ಲಿ ಕೃಷಿಹೊಂಡ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಲ್‌.ಎಂ. ಹೊಸಮನಿ ತಿಳಿಸಿದರು.

ತಾಲ್ಲೂಕಿನಲ್ಲಿ ನಿರ್ಮಾಣಗೊಂಡ ಕೃಷಿ ಹೊಂಡಗಳ ಸ್ಥಿತಿಗತಿ ವೀಕ್ಷಿಸಿದ ಬೆಳಗಾವಿ ಕೃಷಿ ಇಲಾಖೆ ಉಪನಿರ್ದೇಶಕ ಎಚ್‌.ಡಿ. ಕೊಳೇಕರ ಹೊಲಗಳಲ್ಲಿ ಬೆಳೆ ನೋಡಿ ‘ಕೆಲವರು ತರಕಾರಿ ಬೆಳೆದಿದ್ದಾರೆ, ಅದರಿಂದ ವಾರಕ್ಕೆ ₹4 ರಿಂದ ₹5 ಸಾವಿರ ಹಣ ಪಡೆಯುತ್ತಿರುವುದನ್ನು ಕೇಳಿ ಸಂತ ಸಪಟ್ಟರು, ಅಗತ್ಯವಾದರೆ ತಾಲ್ಲೂಕಿಗೆ ಇನ್ನಷ್ಟು ಕೃಷಿಹೊಂಡ ನಿರ್ಮಾಣಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ಕೃಷಿ ಅಧಿಕಾರಿ ಎಂ.ಐ. ಅತ್ತಾರ ತಿಳಿಸಿದರು.

ಪ್ರತಿಕ್ರಿಯಿಸಿ (+)