ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಪ್ಪನ ದರ್ಶನಕ್ಕೆ ವಿಶೇಷ ವ್ಯವಸ್ಥೆ

ಮಲೆಮಹದೇಶ್ವರ ಬೆಟ್ಟ: ಮಹಾಶಿವರಾತ್ರಿಗೆ ಸಕಲ ಸಿದ್ಧತೆ
Last Updated 11 ಫೆಬ್ರುವರಿ 2018, 9:43 IST
ಅಕ್ಷರ ಗಾತ್ರ

ಮಲೆಮಹದೇಶ್ವರ ಬೆಟ್ಟ: ಸುಮಾರು 700 ವರ್ಷಗಳ ಇತಿಹಾಸ ಹೊಂದಿರುವ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿಗೆ (ಫೆ.13) ಸಕಲ ಸಿದ್ಧತೆಗಳು ಶುರುವಾಗಿವೆ. ಶಿವರಾತ್ರಿಗೆ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ.

ಅಂದು ರಾತ್ರಿ ಶಿವನ ಕುರಿತ ನಾಮಸ್ಮರಣೆಯ ಜೊತೆಗೆ ತಮ್ಮ ಕಷ್ಟಗಳ ನಿವಾರಣೆ ಮತ್ತು ಬೇಡಿಕೆ ಈಡೇರಿಕೆಗಾಗಿ ಜಾಗರಣೆ ಮಾಡಲಿದ್ದಾರೆ. ಈ ವರ್ಷ ಶಿವರಾತ್ರಿ ವಿಶೇಷವಾಗಿದ್ದು, ಗುರುವಾರದ ಅಮಾವಾಸ್ಯೆಯಂದು ವಿಶೇಷ ಪೂಜಾ ವಿಧಿವಿಧಾನಗಳು ನೆರವೇರಲಿವೆ.

ಪವಾಡ ಪುರುಷ: ಜನರ ಮೌಢ್ಯತೆ ಹೋಗಲಾಡಿಸಿದ ಬಸವಣ್ಣ, ಅಕ್ಕಮಹಾದೇವಿ, ಜೇಡರದಾಸೀಮಯ್ಯ, ಮಂಟೇಸ್ವಾಮಿ, ಸಿದ್ದಾಪ್ಪಾಜಿ ಅವರಂತೆ ಪವಾಡ ಪುರುಷ ಮಲೆಮಹಾದೇಶ್ವರರೂ ಒಬ್ಬರು. ಧರ್ಮರಕ್ಷಣೆ, ಮನುಕುಲದ ಉದ್ಧಾರಕ್ಕಾಗಿ ಪರಶಿವನೇ ಅವತಾರವನ್ನೆತ್ತಿ ಜನರ ಕಷ್ಟಗಳಿಗೆ ಸ್ಪಂದಿಸಿ, 77 ಮಲೆಗಳ ಮಧ್ಯಭಾಗವಾದ ನಡುಮಲೆಯಲ್ಲಿ ನೆಲೆಸಿದ್ದಾರೆ ಎಂಬ ಪುರಾಣ ಪ್ರತೀತಿ ಇದೆ.

ದೇವಾಲಯಕ್ಕೆ 1 ಕಿಲೋ ಮೀಟರ್ ದೂರದಲ್ಲಿ ಶ್ರೀ ಸಾಲೂರು ಮಠವಿದ್ದು, ಮಹದೇಶ್ವರ ಸ್ವಾಮಿಯವರು ಧರಿಸಿದ್ದ ಜೋಳಿಗೆ, ಬೆತ್ತ, ಬಲಮುರಿ ಶಂಖು, ಪಾದುಕೆ ಇಂದಿಗೂ ಶ್ರೀಮಠದಲ್ಲಿ ಇರಿಸಲಾಗಿದೆ. ಶ್ರೀ ಮಲೆಯಿಂದ ನಾಗಮಲೆಯು 12 ಕಿಲೋ ಮೀಟರ್ ಅಂತರವಿದ್ದು, ಇಲ್ಲಿ ಮಹದೇಶ್ವರರು ಜಪಾಶಕ್ತರಾಗಿರುವಾಗ ಶಿವಲಿಂಗಕ್ಕೆ ನಾಗರಹಾವು ನೆರಳು ನೀಡಿತೆಂಬ ಪುರಾಣ ಇತಿಹಾಸವಿದೆ. ನಾಗರಹಾವು ನೆರಳು ನೀಡಿರುವ ಶಿಲೆಯನ್ನು ಇಂದಿಗೂ ಇಲ್ಲಿ ದರ್ಶನ ಮಾಡಬಹುದು.

ಮಲೆಮಹದೇಶ್ವರ ಬೆಟ್ಟಕ್ಕೆ ಇಂದಿಗೂ ಮೈಸೂರು, ಕೊಳ್ಳೇಗಾಲ, ಚಾಮರಾಜನಗರ, ಗುಂಡ್ಲುಪೇಟೆ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಭಕ್ತರು ಕಾಲ್ನಡಿಗೆಯಲ್ಲಿ ಬಂದು ಮಹದೇಶ್ವರನ ದರ್ಶನ ಪಡೆಯುತ್ತಿದ್ದಾರೆ.

ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಶ್ರೀ ಮಹದೇಶ್ವರ ಬೆಟ್ಟ ಆಡಳಿತ ಮಂಡಳಿಯಿಂದ ಅಲ್ಲಿಲ್ಲಿ ಕುಡಿಯುವ ನೀರು, ಸುಸಜ್ಜಿತ ರಸ್ತೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ಮಲೆಮಹದೇಶ್ವರ ಸ್ವಾಮಿಯ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಜಿ.ಪ್ರದೀಪ್ ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT