ಭಾನುವಾರ, ಡಿಸೆಂಬರ್ 8, 2019
25 °C
ದೆಹಲಿ ಹೈಕೋರ್ಟ್ ತೀರ್ಪು

ಪತ್ನಿಗೆ 21 ಬಾರಿ ಚಾಕುವಿನಿಂದ ಇರಿದು ಕೊಂದಿದ್ದ ಪತಿಗೆ ಜೀವಾವಧಿ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪತ್ನಿಗೆ 21 ಬಾರಿ ಚಾಕುವಿನಿಂದ ಇರಿದು ಕೊಂದಿದ್ದ ಪತಿಗೆ ಜೀವಾವಧಿ ಶಿಕ್ಷೆ

ನವದೆಹಲಿ: ಆರು ವರ್ಷಗಳ ಹಿಂದೆ ಪತ್ನಿಗೆ 21 ಬಾರಿ ಚಾಕುವಿನಿಂದ ಇರಿದು ಕೊಂದಿದ್ದ ಪತಿಗೆ ದೆಹಲಿ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

ನ್ಯಾಯಾಮೂರ್ತಿ ಸುನೀಲ್ ಗೌರ್ ಹಾಗೂ ಪ್ರತಿಭಾ ಎಮ್ ಸಿಂಗ್ ಅವರಿದ್ದ ವಿಭಾಗೀಯ ಪೀಠ ಸ್ಥಳೀಯ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ. 

ಆರೋಪಿ ಪತಿ ದೇವೇಂದ್ರ ದಾಸ್  ಸ್ಥಳೀಯ ನ್ಯಾಯಾಲಯದ ತೀರ್ಪನ್ನು ವಜಾಗೊಳಿಸುವಂತೆ ದೆಹಲಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

2012ರಲ್ಲಿ ದೇವೇಂದ್ರ ಪತ್ನಿ ಜತೆಗಿನ ಜಗಳವನ್ನೇ ನೆಪಮಾಡಿಕೊಂಡ ಪತ್ನಿಗೆ 21 ಬಾರಿ ಚಾಕುವಿನಿಂದ ಇರಿದು ಭೀಕರವಾಗಿ ಕೊಂದಿದ್ದನು.

ಪ್ರತಿಕ್ರಿಯಿಸಿ (+)