ರಮೇಶ್‌ ಕುಮಾರ್‌ ಪದಚ್ಯುತಿ: 17ಕ್ಕೆ ನಗರಸಭೆ ಅಧಿವೇಶನ

7

ರಮೇಶ್‌ ಕುಮಾರ್‌ ಪದಚ್ಯುತಿ: 17ಕ್ಕೆ ನಗರಸಭೆ ಅಧಿವೇಶನ

Published:
Updated:

ಕೆಜಿಎಫ್‌: ರಾಬರ್ಟಸನ್‌ಪೇಟೆ ನಗರಸಭೆ ಅಧ್ಯಕ್ಷ ರಮೇಶ್‌ ಕುಮಾರ್‌ ಅವರನ್ನು ಪದಚ್ಯುತಿ ಮಾಡಬೇಕು ಎಂದು ಹಲ ಸದಸ್ಯರು ನೀಡಿದ ಮನವಿ ಮೇರೆಗೆ ಫೆ.17ರಂದು ನಗರಸಭೆಯ ಅಧಿವೇಶನ ಕರೆಯಲಾಗಿದೆ.

ಕಳೆದ ಎರಡು ತಿಂಗಳಿಂದ ನಡೆಸುತ್ತಿರುವ ರಾಜಕೀಯ ಕಸರತ್ತಿ ನಿಂದಾಗಿ ನಗರದಲ್ಲಿ ಬಹುತೇಕ ನಗರಸಭೆ ಸದಸ್ಯರು ನಾಪತ್ತೆಯಾಗಿ ದ್ದಾರೆ. ಅಧ್ಯಕ್ಷ ರಮೇಶ್‌ ಕುಮಾರ್‌ ಅವರನ್ನು ಪದಚ್ಯುತಗೊಳಿಸಬೇಕು ಎಂದು ಪ್ರಯತ್ನ ನಡೆಸುತ್ತಿರುವ ಹಿಂದಿನ ಅಧ್ಯಕ್ಷ ಕೆ.ಸಿ.ಮುರಳಿ ಹಲ ಸದಸ್ಯರನ್ನು ತಮಿಳುನಾಡಿನ ಅಜ್ಞಾತ ಸ್ಥಳದಲ್ಲಿ ಇರಿಸಿದ್ದಾರೆ. ಅಧಿಕಾರ ಉಳಿಸಿಕೊಳ್ಳಬೇಕು ಎಂದು ಹವಣಿಸುತ್ತಿರುವ ರಮೇಶ್‌ ಕುಮಾರ್‌ ಕೂಡ ತನ್ನ ಬೆಂಬಲಿಗರನ್ನು ದೂರದ ಊರಿನಲ್ಲಿ ಇರಿಸಿದ್ದಾರೆ.

ಸದಾ ಸದಸ್ಯರು ಮತ್ತು ಅವರ ಹಿಂಬಾ ಲಕರಿಂದ ತುಂಬಿರುತ್ತಿದ್ದ ನಗರಸಭೆ ಕಚೇರಿಗಳಲ್ಲಿ ಅಪರೂಪಕ್ಕೆ ಸದಸ್ಯರು ದರ್ಶನವಾಗುತ್ತಿದೆ.

ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸಲು ಸಭೆ ನಡೆಸುವಂತೆ ನಗರಸಭೆಯ ಆಯುಕ್ತರಿಗೆ ಪತ್ರ ಸಲ್ಲಿಸುವಾಗ ಬಂಡಾಯ ಕಾಂಗ್ರೆಸಿನ ಕೆ.ಸಿ.ಮುರಳಿ ಜತೆಗೆ ಜೆಡಿಎಸ್‌ನ ಎಂ.ಭಕ್ತವತ್ಸಲಂ, ಬಿಜೆಪಿಯ ಮುಖಂಡರು ಸೇರಿದಂತೆ ಹಲ ಸದಸ್ಯರು ಹಾಜರಿದ್ದರು. ಜೆಡಿಎಸ್ ಮತ್ತು ಬಿಜೆಪಿ ಸದ್ಯಕ್ಕೆ ಒಂದಾಗಿದ್ದಾರೆ. ಅವರು ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ನಿರೀಕ್ಷಿತ ಬೆಂಬಲ ಸಿಗದೇ ಇದ್ದರಿಂದ ಸುಮಾರು ಎರಡು ತಿಂಗಳಿಂದ ಸದಸ್ಯರು ಪ್ರವಾಸ ಭಾಗ್ಯದಲ್ಲಿಯೇ ನಿರತರಾಗಿದ್ದಾರೆ.

ಬಂಡಾಯವೆದ್ದ ಕಾಂಗ್ರೆಸ್ ಸದಸ್ಯರುಗಳಿಗೆ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಬೆಂಬಲ ಸೂಚಿಸುವ ನಿರೀಕ್ಷೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry