ಬುಧವಾರ, ಡಿಸೆಂಬರ್ 11, 2019
16 °C

ಸರಾಟೋವಾ ಏರ್‌ಲೈನ್‌ ವಿಮಾನ ಪತನ, 71 ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರಾಟೋವಾ ಏರ್‌ಲೈನ್‌ ವಿಮಾನ ಪತನ, 71 ಮಂದಿ ಸಾವು

ಮಾಸ್ಕೋ: ಸರಾಟೋವಾ ಏರ್‌ಲೈನ್‌ಗೆ ಸೇರಿದ ಪ್ರಯಾಣಿಕರ ವಿಮಾನವು ಇಲ್ಲಿನ ರಾಮೆನ್‌ಸ್ಕಿಯ ಹೊರವಲಯದಲ್ಲಿ  ಭಾನುವಾರ ಪತನವಾಗಿದ್ದು,  71 ಮಂದಿ ಸಾವಿಗೀಡಾಗಿದ್ದಾರೆ.

ದುರಂತಕ್ಕೀಡಾದ ಅನ್‌ಟೊನೋವ್ ಆನ್‌–148 ಹೆಸರಿನ ವಿಮಾನವು ಉರಲ್ಸ್‌ನ ಒರಸ್ಕ್‌ ನಗರಕ್ಕೆ ಪ್ರಯಾಣ ಬೆಳೆಸಿತ್ತು. ವಿಮಾನದಲ್ಲಿ 65 ಮಂದಿ ಪ್ರಯಾಣಿಕರು ಹಾಗೂ 6 ಸಿಬ್ಬಂದಿ ಇದ್ದರು ಎಂದು ತಿಳಿದು ಬಂದಿದೆ.

ಈ ಅನಾಹುತದ ಬಗ್ಗೆ ಖಚಿತತೆ ನೀಡಿದ ರಷ್ಯಾ ಸಚಿವಾಲಯವು, ವಿಮಾನದ ಅವಶೇಷಗಳು ಪತ್ತೆಯಾಗಿವೆ ಎಂದು ಹೇಳಿದೆ.

ಈ ದುರಂತದ ನಿಖರ ಕಾರಣ ತಿಳಿದು ಬಂದಿಲ್ಲ. ಹವಾಮಾನ ವೈಪರಿತ್ಯ, ಪೈಲಟ್‌ನ ನಿರ್ಲಕ್ಷ್ಯತನ.. ಹೀಗೆ ಹಲವು ಕಾರಣಗಳು ಇದ್ದಿರಬಹುದು. ತನಿಖೆಯ ನಂತರವಷ್ಟೇ ತಿಳಿಯಬೇಕಾಗಬೇಕಿದೆ ಎಂದು ರಷ್ಯನ್ ನ್ಯೂಸ್ ಏಜೆನ್ಸಿ ಇಂಟರ್‌ಫ್ಲೆಕ್ಸ್ ವರದಿ ಮಾಡಿದೆ.

ಪ್ರತಿಕ್ರಿಯಿಸಿ (+)