ಮಂಗಳವಾರ, ಡಿಸೆಂಬರ್ 10, 2019
19 °C

ಮಹಿಳೆಯರ ಜಾಕೆಟ್‌ ತೊಟ್ಟ ರಣವೀರ್‌

Published:
Updated:
ಮಹಿಳೆಯರ ಜಾಕೆಟ್‌ ತೊಟ್ಟ ರಣವೀರ್‌

ರಣವೀರ್‌ ಸಿಂಗ್‌ ಬಾಲಿವುಡ್‌ನ ಸ್ಟೈಲಿಸ್ಟ್‌ ನಟ. ಫ್ಯಾಷನ್‌ ಜಗತ್ತಿನ ಹೊಸತುಗಳನ್ನು ಅವರು ಅನುಕರಣೆ ಮಾಡುತ್ತಿರುತ್ತಾರೆ. ಈಗ ಮನೀಷ್‌ ಅರೋರ ಅವರ ಮಹಿಳೆಯರ ಉಡುಪುಗಳ ಸಂಗ್ರಹದಲ್ಲಿದ್ದ ಗುಲಾಬಿ ಬಣ್ಣದ ಜಿಗ್‌ಜಾಗ್‌ ವಿನ್ಯಾಸದ ಜಾಕೆಟ್‌ ಅನ್ನು ಧರಿಸಿ ಸುದ್ದಿಯಲ್ಲಿದ್ದಾರೆ.

ರಣವೀರ್‌ ಸಿಂಗ್‌ ಅವರು ಸರಳ ಅಭಿರುಚಿಯ ಸರಳ ವ್ಯಕ್ತಿ. ಅವರಿಗೆ ಪ್ರಿಂಟೆಡ್‌ ಜಾಕೆಟ್‌, ಸನ್‌ಗ್ಲಾಸ್‌ಗಳು ಅಂದ್ರೆ ತುಂಬ ಇಷ್ಟ. ಹೀಗಾಗಿ ವಿಭಿನ್ನ ಫ್ಯಾಷನ್‌ ಸ್ಟೇಟ್‌ಮೆಂಟ್‌ಗಳಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತನ್ನ ಮನಸೆಳೆದ ಗುಲಾಬಿ ಬಣ್ಣದ ಪ್ರಿಂಟೆಡ್‌ ಜಾಕೆಟ್‌ ತೊಟ್ಟು ಫ್ಯಾಷನ್‌ ಜಗತ್ತಿನಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡರು.

ರಣವೀರ್‌ ಹೊಳೆಯುವ ಜಾಕೆಟ್‌ ಒಳಗೆ ಬಿಳಿ ಬಣ್ಣದ ಟೀ ಶರ್ಟ್‌ ಹಾಗೂ ಅದಕ್ಕೆ ಬಿಳಿ ಬಣ್ಣದ ಪ್ಯಾಂಟ್‌ ಧರಿಸಿದ್ದರು. ಆ ಬಟ್ಟೆಗೆ ಹೊಂದಿಕೊಳ್ಳುವಂತೆ ಸಿಲ್ವರ್‌ ಬಣ್ಣದ ಶೂ, ಹಳದಿ ಗ್ಲಾಸ್‌ನ ತಂಪು ಕನ್ನಡಕ ತೊಟ್ಟು ಮಿಂಚಿದರು. ಈ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ನಟ ’ಇಷ್ಟವಾದರೆ ತೊಟ್ಟುಕೊಳ್ಳಿ, ಇದೊಂದೇ ಫ್ಯಾಷನ್‌ ನಿಯಮ’ ಎಂದು ಬರೆದುಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)