ಬುಧವಾರ, ಡಿಸೆಂಬರ್ 11, 2019
16 °C

‘ನನ್ನ ಚಿತ್ರಗಳೆಲ್ಲಾ ವಿಶಿಷ್ಟ’

Published:
Updated:
‘ನನ್ನ ಚಿತ್ರಗಳೆಲ್ಲಾ ವಿಶಿಷ್ಟ’

ಕೆಜಿಎಫ್‌ ಚಿತ್ರದ ಬಗ್ಗೆ ಹೇಳಿ...

ಚಿತ್ರೀಕರಣ ನಡೆಯುತ್ತಿದೆ. ಸಾಕಷ್ಟು ಜನರು ಶ್ರಮಿಸುತ್ತಿದ್ದಾರೆ. ಲಕ್ಷಾಂತರ ಜನರು ಟೀಸರ್ ನೋಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ವಿಭಿನ್ನ ಚಿತ್ರ. ನಾನು ಮಾಡುವ ಚಿತ್ರಗಳೆಲ್ಲ ಯುನೀಕ್ (ವಿಶಿಷ್ಟ) ಆಗಿರುತ್ವೆ. ಕೆಜಿಎಫ್, ಬಾಗಲಕೋಟೆ, ಬೆಂಗಳೂರು, ಕೋಲ್ಕತ್ತ, ಮುಂಬೈ ನಗರಗಳಲ್ಲಿ ಚಿತ್ರೀಕರಣವಾಗಿದೆ.

ಕೆಜಿಎಫ್‌ನ ಬಜೆಟ್ ಎಷ್ಟು?

ದೊಡ್ಡ ಪ್ರಮಾಣದ ಬಜೆಟ್‌ ಎಂದಷ್ಟೇ ಹೇಳಬಹುದು, ಲೆಕ್ಕ ಹಾಕಿಲ್ಲ.

ಕಾರು ಅಂದ್ರೆ ಇಷ್ಟನಾ?

ಹಾಗೇನಿಲ್ಲ, ಹೊಸ ಕಾರು ಖರೀದಿಸಿ ತುಂಬಾ ವರ್ಷಗಳಾಗಿದ್ದವು ಹಾಗಾಗಿ ಇತ್ತೀಚೆಗೆ ಕಾರು ಖರೀದಿಸಿದೆ ಅಷ್ಟೇ.

ಸಮಾಜಕಾರ್ಯ...

ಕೊಪ್ಪಳದ ತಲ್ಲೂರು ಕೆರೆ ಅಭಿವೃದ್ಧಿಯಾಗಿದೆ. ಮುಂದೆಯೂ ಮಾಡಬೇಕಾದ ಕೆಲಸಗಳಿವೆ. ಹೇಳುವುದಕ್ಕಿಂತ ಮಾಡಿ ತೋರಿಸುವುದು ಒಳ್ಳೆಯದು, ನಾನು ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ ಎಂದು ಹೇಳಿಕೊಳ್ಳುವುದು ಸರಿಯಲ್ಲ.

ನಿರ್ದೇಶನದ ಕನಸು...

ಖಂಡಿತ ಇಲ್ಲ

ಪತ್ನಿ ರಾಧಿಕಾ ಪಂಡಿತ್‌ ಅವರೊಂದಿಗೆ ಸಿನಿಮಾ ಮಾಡುವ ಯೋಚನೆ ಇದೆಯಾ?

ಒಳ್ಳೆಯ ಚಿತ್ರಕಥೆ ಸಿಗಬೇಕು. ಸದ್ಯಕ್ಕೆ ಒಟ್ಟಿಗೆ ಸಿನಿಮಾ ಮಾಡುವ ಪ್ಲಾನ್ ಇಲ್ಲ. ಕಾದು ನೋಡೋಣ.

ಫಿಟ್‌ನೆಸ್‌ ಮಂತ್ರ...

ಸಿನಿಮಾ ಕ್ಷೇತ್ರದಲ್ಲಿದ್ದ ಮೇಲೆ ಫಿಟ್‌ನೆಸ್‌ ಕಾಯ್ದುಕೊಳ್ಳಲೇಬೇಕು. ಚಿತ್ರೀಕರಣ, ಸಮಾರಂಭಗಳ ಒತ್ತಡವಿದ್ದರೂ ದಿನಕ್ಕೆ ಎರಡು ಬಾರಿ ಜಿಮ್‌ನಲ್ಲಿ ಬೆವರಿಳಿಸುತ್ತೇನೆ. ಎರಡು ಗಂಟೆ ವ್ಯಾಯಾಮ ಮಾಡುತ್ತೇನೆ.

ಮದುವೆ ನಂತರವೂ ಹುಡುಗೀರು ಪ್ರಪೋಸ್ ಮಾಡ್ತಿದ್ದಾರಾ?

ಇಲ್ಲಪ್ಪ, ನನಗೆ ಒಬ್ಬಳೇ ಹೆಂಡತಿ. ಅಭಿಮಾನಿಗಳ ಪ್ರೀತಿ ಎಂದಿನಂತೆ ಇದ್ದೇ ಇರುತ್ತೆ.

ಸಿನಿಮಾಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತೀರಾ?

ಕಥೆ ಚೆನ್ನಾಗಿರಬೇಕು. ನಿರ್ದೇಶಕರು, ನಿರ್ಮಾಪಕರು ಎಲ್ಲರನ್ನೂ ಗಮನಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ.

ಮುಂದಿನ ಸಿನಿಮಾಗಳು...

ಒಂದು ಸಿನಿಮಾ ಮುಗಿಯುವವರೆಗೂ ಬೇರೆ ಪ್ರಾಜೆಕ್ಟ್‌ಗಳಿಗೆ ಕೈಹಾಕೋದಿಲ್ಲ. ಹರ್ಷ ನಿರ್ದೇಶನದ ‘ರಾಣ’ ಹಾಗೂ ‘ಮಫ್ತಿ’ ಸಿನಿಮಾ ನಿರ್ದೇಶಿಸಿದ್ದ ನರ್ತನ್‌ ಅವರ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ.

ಪ್ರತಿಕ್ರಿಯಿಸಿ (+)