ಬುಧವಾರ, ಡಿಸೆಂಬರ್ 11, 2019
15 °C

ಎರಡು ಲಕ್ಷ ವಿದೇಶಿಯರಿಗೆ ವೈದ್ಯಕೀಯ ವೀಸಾ

ಪಿಟಿಐ Updated:

ಅಕ್ಷರ ಗಾತ್ರ : | |

ಎರಡು ಲಕ್ಷ ವಿದೇಶಿಯರಿಗೆ ವೈದ್ಯಕೀಯ ವೀಸಾ

ನವದೆಹಲಿ: 2016ರಲ್ಲಿ ಎರಡು ಲಕ್ಷಕ್ಕೂ ಹೆಚ್ಚು ವಿದೇಶಿಯರು ಭಾರತದಲ್ಲಿ ಆರೋಗ್ಯ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಇವರಲ್ಲಿ 1,678 ಪಾಕಿಸ್ತಾನಿಯರು ಮತ್ತು 296 ಅಮೆರಿಕದವರು ಇದ್ದಾರೆ. ಇದು ಭಾರತವು ಆರೋಗ್ಯ ಚಿಕಿತ್ಸಾ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ. 54 ದೇಶಗಳ 2,01,099 ಜನರಿಗೆ ವೈದ್ಯಕೀಯ ವೀಸಾ ನೀಡಲಾಗಿತ್ತು ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ.

ಅಭಿವೃದ್ಧಿಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸಾ ಸೌಲಭ್ಯವು ಕಡಿಮೆ ವೆಚ್ಚದಲ್ಲಿ ದೊರೆಯುತ್ತಿರುವುದು ವಿದೇಶಿಯರನ್ನು ಹೆಚ್ಚಾಗಿ ಸೆಳೆಯುತ್ತಿದೆ. ಭಾರತದಲ್ಲಿನ ವೈದ್ಯಕೀಯ ಪ್ರವಾಸೋದ್ಯಮವು ಸದ್ಯಕ್ಕೆ ₹ 19,500 ಕೋಟಿಗಳಷ್ಟಿದೆ. 2020ರ ವೇಳೆಗೆ ಇದು ₹ 45,500 ಕೋಟಿಗಳಿಂದ ₹ 52,000 ಕೋಟಿಗಳಿಗೆ ತಲುಪುವ ನಿರೀಕ್ಷೆ ಇದೆ.

ವೈದ್ಯಕೀಯ ವೀಸಾ ಪಡೆದವರಲ್ಲಿ ಬಾಂಗ್ಲಾದೇಶ (99,799 ನಾಗರಿಕರು) ಮೊದಲ ಸ್ಥಾನದಲ್ಲಿ ಇದೆ.  ಆಫ್ಗಾನಿಸ್ತಾನ (33,955), ಇರಾಕ್‌ (13,465), ಓಮನ್‌ (12,227), ಉಜ್ಬೆಕಿಸ್ತಾನ (4,421), ನೈಜಿರಿಯಾ (4,359), ಇಂಗ್ಲೆಂಡ್‌ (370), ರಷ್ಯಾ (96) ಮತ್ತು ಆಸ್ಟ್ರೇಲಿಯಾದ 75 ನಾಗರಿಕರು ಚಿಕಿತ್ಸೆಗಾಗಿ ಭಾರತಕ್ಕೆ ಭೇಟಿ ನೀಡಿದ್ದರು.

ಪ್ರತಿಕ್ರಿಯಿಸಿ (+)