ಬುಧವಾರ, ಡಿಸೆಂಬರ್ 11, 2019
22 °C

ಚಿನ್ನದ ಇಟಿಎಫ್‌: ನಿಲ್ಲದ ಹೊರಹರಿವು

Published:
Updated:
ಚಿನ್ನದ ಇಟಿಎಫ್‌: ನಿಲ್ಲದ ಹೊರಹರಿವು

ನವದೆಹಲಿ: ಹೂಡಿಕೆದಾರರು ಚಿನ್ನದ ವಿನಿಮಯ ವಹಿವಾಟು ನಿಧಿಗಳಿಂದ (ಇಟಿಎಫ್‌) ಜನವರಿಯಲ್ಲಿ ₹ 110 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ. ಇದರಿಂದ ಆರ್ಥಿಕ ವರ್ಷದ 10 ತಿಂಗಳಿನಲ್ಲಿ ಒಟ್ಟಾರೆ ₹ 679 ಕೋಟಿ ಹೊರ ಹೋದಂತಾಗಿದೆ.

ಚಿನ್ನದ ಇಟಿಎಫ್‌ನಿಂದ ಬರುತ್ತಿರುವ ಗಳಿಕೆ ಪ್ರಮಾಣ ಬಹಳ ಕಡಿಮೆ ಇದೆ. ಹೀಗಾಗಿ ಹೂಡಿಕೆದಾರರು ಮಾರಾಟಕ್ಕೆ ಹೆಚ್ಚು ಗಮನ ನೀಡುತ್ತಿದ್ದಾರೆ ಎಂದು ಭಾರತೀಯ ಮ್ಯೂಚುವಲ್‌ ಫಂಡ್ ಸಂಸ್ಥೆಗಳ ಒಕ್ಕೂಟ ತಿಳಿಸಿದೆ.

ಷೇರುಗಳು ಮತ್ತು ಷೇರು ಸಂಬಂಧಿತ ಉಳಿತಾಯ ಯೋಜನೆಗಳಲ್ಲಿ ₹ 1.5 ಲಕ್ಷ ಕೋಟಿ ಹೂಡಿಕೆ ಆಗಿದೆ. ಇದರಲ್ಲಿ ಜನವರಿ ತಿಂಗಳ ಹೂಡಿಕೆಯೇ ₹ 15,000 ಕೋಟಿ ಇದೆ.

‘2013ರ ಫೆಬ್ರುವರಿ ತಿಂಗಳಿನಿಂದ ಚಿನ್ನದ ಇಟಿಎಫ್‌ ಆಕರ್ಷಣೆ ಕಳೆದುಕೊಳ್ಳಲಾರಂಭಿಸಿದೆ. ದೇಶದ ಚಿನ್ನದ ಮೂರು ವರ್ಷಗಳ ಗಳಿಕೆಯು ಶೇ 3ಕ್ಕಿಂತಲೂ ಕಡಿಮೆ ಇದೆ. ಅಂದರೆ ಬ್ಯಾಂಕ್‌ನ ಉಳಿತಾಯ ಖಾತೆಗೆ ಸಿಗುವ ಬಡ್ಡಿಗಿಂತಲೂ ಕಡಿಮೆಯಾಗಿದೆ’ ಎಂದು ಫಂಡ್ಸ್‌ಇಂಡಿಯಾಡಾಟ್‌ಕಾಂನ ಮ್ಯೂಚುವಲ್‌ ಫಂಡ್ಸ್‌ ಸಂಶೋಧನಾ ವಿಭಾಗದ ಮುಖ್ಯಸ್ಥೆ ವಿದ್ಯಾ ಬಾಲಾ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)