ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಶೂನ್ಯ ನಡೆ!

Last Updated 11 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಶಿವರಾತ್ರಿ ಹಬ್ಬದಂದು ಮಾಂಸ ಮಾರಾಟಕ್ಕೆ ನಿಷೇಧ ಹೇರಿರುವ ಸ್ಥಳೀಯ ಆಡಳಿತದ ಕ್ರಮ ನಿಜಕ್ಕೂ ವಿಚಾರ ಶೂನ್ಯವನ್ನು ಸಂಕೇತಿಸುತ್ತದೆ. ಮಾನವನ ಇಷ್ಟಾನಿಷ್ಟಗಳನ್ನುದೈವಗಳಿಗೂ ಆರೋಪಿಸಿ, ಮಾಂಸಾಹಾರಿ ದೇವರು, ಸಸ್ಯಾಹಾರಿ ದೇವರು ಎಂದು ವಿಭಾಗಿಸಿರುವುದೇ ವಿಷಾದಕರ.

ಅವೈದಿಕನಾದ ಶಿವನನ್ನು ಅವನ ಕ್ಷುದ್ರ ರೂಪಗಳಾದ ಭೂತರಾಯ, ವೀರಭದ್ರ ಮುಂತಾದ ಹೆಸರುಗಳಲ್ಲಿ ಆರಾಧಿಸುವ ಜನಸಮುದಾಯದವರು ಮುಖ್ಯವಾಗಿ ಮಾಂಸವನ್ನು ನಿವೇದಿಸುತ್ತಾರೆಯೇ ವಿನಾ ನಿಷೇಧಿಸಿಲ್ಲ. ಮಾಂಸವನ್ನು ನೈವೇದ್ಯ ಮಾಡಿ ಶಿವನನ್ನು ಒಲಿಸಿಕೊಂಡು ಭಕ್ತಿಯ ಸಾರ್ಥಕ್ಯವನ್ನು ಮಾದರಿಯಾಗಿಸಿರುವ ಬೇಡರ ಕಣ್ಣಪ್ಪ ಹಾಗೂ ತನ್ನ ಮಗನ ಮಾಂಸವನ್ನೇ ಬೇಯಿಸಿ ಶಿವನಿಗೆ ಉಣಬಡಿಸಿದ ಭಕ್ತಸಿರಿಯಾಳರ ಬಹುದೊಡ್ಡ ನಿದರ್ಶನವಿರುವಾಗ ಮಾಂಸ ನಿಷೇಧದ ಕ್ರಮ ಬೌದ್ಧಿಕ ದಿವಾಳಿತನವಲ್ಲದೆ ಬೇರೇನೂ ಅಲ್ಲ.

ನಿಸರ್ಗವೇ ಬದಲಾವಣೆಗೆ ಒಡ್ಡಿಕೊಳ್ಳುತ್ತಿದೆ. ಹಾಗಿರುವಾಗ ಇಂತಹ ಕ್ಷುದ್ರವಾದ ಆಲೋಚನೆಗಳು ಬದಲಾಗದಿದ್ದರೆ ಹೇಗೆ? ಸಮಾಜ ಬದಲಾಗದಿದ್ದರೆ ಹೇಗೆ?  ಈ ಆಹಾರ ರಾಜಕಾರಣ ಕೊನೆಯಾಗುವುದು ಹೇಗೆ? ಮನಸು ಮಲಿನವಾಗುವುದೇ ವಿನಾ ಮಾಂಸ ಮಲಿನವಲ್ಲ, ಅದೊಂದು ಆಹಾರ ಅಷ್ಟೆ. ಮಲಿನಗೊಂಡ ಆಡಳಿತದ ಮನಸ್ಸನ್ನು ಮುನಿಸಿಪಾಲಿಟಿಯವರೇ ಶುಚಿಗೊಳಿಸಬೇಕಿದೆ.

–ಮೂರ್ತಿ ತಿಮ್ಮನಹಳ್ಳಿ, ಹೊಸಂಗಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT