ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿನೇರಳೆ ಕಿರಣಗಳಿಂದ ಫ್ಲೂ ವೈರಸ್ ನಾಶ

Last Updated 11 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಫ್ಲೂಗೆ (ಜ್ವರ, ತಲೆನೋವು) ಕಾರಣವಾಗುವ ವೈರಸ್‌ ಕೊಲ್ಲಲು ಅಲ್ಪ ಪ್ರಮಾಣದ ದೂರತರಂಗದ ಅತಿನೇರಳೆ ಕಿರಣಗಳು ಸಹಕಾರಿ ಎಂದು ಅಧ್ಯಯನವೊಂದು ತಿಳಿಸಿದೆ.

ಕೊಲಂಬಿಯಾ ವಿಶ್ವವಿದ್ಯಾಲಯದ ಇರ್ವಿಂಗ್ ವೈದ್ಯಕೀಯ ಕೇಂದ್ರದ (ಸಿಯುಐಎಂಸಿ) ವಿಜ್ಞಾನಿಗಳು ಈ ಸಂಶೋಧನೆ ನಡೆಸಿದ್ದು, ‘ಸೈಂಟಿಫಿಕ್ ರಿಪೋರ್ಟ್ಸ್’ ನಿಯತಕಾಲಿಕದಲ್ಲಿ ಈ ಸಂಶೋಧನಾ ಲೇಖನ ಪ್ರಕಟವಾಗಿದೆ.

‘ಸೋಂಕು ಉಂಟು ಮಾಡುವ ಬ್ಯಾಕ್ಟೀರಿಯಾ ಮತ್ತು ವೈರಸ್ ಕೊಲ್ಲಲು ಹಲವು ವರ್ಷಗಳಿಂದ ‘ಸಿ’ ವಿಧದ ಅತಿನೇರಳೆ ಕಿರಣಗಳನ್ನು(ಯುವಿ–ಸಿ) ಬಳಸಲಾಗುತ್ತಿತ್ತು. ಆದರೆ ಯುವಿ–ಸಿ ಕಿರಣಗಳಿಂದ ಆರೋಗ್ಯದ ಮೇಲೆ ಪರಿಣಾಮ ಉಂಟಾಗಿ, ಚರ್ಮದ ಕ್ಯಾನ್ಸರ್ ಮತ್ತು ಕಣ್ಣಿನ ಪೊರೆಯ ಸಮಸ್ಯೆಗಳು ಉಂಟಾಗುತ್ತಿದ್ದವು’ ಎಂದು ಸಿಯುಐಎಂಸಿಯ ಅಧ್ಯಾಪಕ ಡೇವಿಡ್ ಜೆ. ಬ್ರೆನ್ನರ್ ತಿಳಿಸಿದ್ದಾರೆ.

ಈ ಹಿಂದೆ ಬಳಸುತ್ತಿದ್ದ ವಿಧಾನಕ್ಕಿಂತ ಇದು ಉತ್ತಮ ವಿಧಾನ ಎಂದು ಅವರು ತಿಳಿಸಿದ್ದಾರೆ.

‘ಅಧ್ಯಯನಕ್ಕೆ ಎಚ್‌1ಎನ್‌1 ವೈರಸ್‌ ಮತ್ತು 222 ನ್ಯಾನೊ ಮೀಟರ್ ತರಂಗಾಂತರದ ದೂರತರಂಗ ಯುವಿಸಿ ಕಿರಣಗಳನ್ನು ಬಳಸಲಾಗಿತ್ತು. ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ಮಾತ್ರ ಕೊಲ್ಲುತ್ತವೆ’ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT