ಬುಧವಾರ, ಡಿಸೆಂಬರ್ 11, 2019
26 °C

‘ಇರಾನ್‌ ಸೇನಾ ನೆಲೆಗೆ ಅವಕಾಶ ಇಲ್ಲ’

ಎಎಫ್‌ಪಿ Updated:

ಅಕ್ಷರ ಗಾತ್ರ : | |

‘ಇರಾನ್‌ ಸೇನಾ ನೆಲೆಗೆ ಅವಕಾಶ ಇಲ್ಲ’

ಜೆರುಸಲೇಂ: 'ಸಿರಿಯಾದಲ್ಲಿ ಸೇನೆ ನೆಲೆ ಸ್ಥಾಪಿಸಲು ಇರಾನ್‌ಗೆ ಅವಕಾಶ ನೀಡುವುದಿಲ್ಲ' ಎಂದು ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು ತಿಳಿಸಿದ್ದಾರೆ.

‘ಇಸ್ರೇಲ್‌ ಶಾಂತಿ ಬಯಸುತ್ತದೆ. ಆದರೆ, ನಮ್ಮ ದೇಶದ ವಿರುದ್ಧ ನಡೆಯುವ ದಾಳಿಯನ್ನು ಸಮರ್ಥವಾಗಿ ಎದುರಿಸಲು ಬದ್ಧರಾಗಿದ್ದೇವೆ. ಸಿರಿಯಾ ಅಥವಾ ಇತರೆಡೆ ಸೇನಾ ನೆಲೆಯನ್ನು ವಿಸ್ತರಿಸುವ ಇರಾನ್‌ ಪ್ರಯತ್ನವನ್ನು ವಿರೋಧಿಸುತ್ತೇವೆ’ ಎಂದು ಅವರು ತಿಳಿಸಿದ್ದಾರೆ.

ಸಿರಿಯಾದಿಂದ ಶನಿವಾರ ತನ್ನ ಪ್ರದೇಶದ ಮೇಲೆ ಇರಾನ್‌ ’ಡ್ರೋನ್‌’ ಉಡಾವಣೆ ಮಾಡಿದ್ದನ್ನು ಇಸ್ರೇಲ್‌ ಪತ್ತೆ ಮಾಡಿತ್ತು. ಬಳಿಕ, ‘ಡ್ರೋನ್‌’ ನಿಯಂತ್ರಣ ವ್ಯವಸ್ಥೆ ಮೇಲೆ ಇಸ್ರೇಲ್‌ ವಾಯು ದಾಳಿ ನಡೆಸಿತ್ತು. ಹೀಗಾಗಿ, ನೆತನ್ಯಾಹು ಈ ಹೇಳಿಕೆ ನೀಡುವ ಮೂಲಕ ಇರಾನ್‌ಗೆ ಸಂದೇಶ ರವಾನಿಸಿದ್ದಾರೆ.

‘ಅತಿಕ್ರಮಣ ಪ್ರವೇಶಕ್ಕೆ ಇರಾನ್‌ ಹೊಣೆಯಾಗಿದೆ. ನಮ್ಮ ದೇಶದ ಸಾರ್ವಭೌಮತೆ ಮತ್ತು ಭದ್ರತೆ ಕಾಪಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇವೆ’ ಎಂದು ನೆತನ್ಯಾಹು ಅವರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)