ಸೋಮವಾರ, ಡಿಸೆಂಬರ್ 9, 2019
21 °C

ಕಾಂಗ್ರೆಸ್‌ ಸಾಮಾಜಿಕ ಮಾಧ್ಯಮ ತಂಡಕ್ಕೆ ಸಂಪನ್ಮೂಲ ಕೊರತೆ: ರಮ್ಯಾ

Published:
Updated:
ಕಾಂಗ್ರೆಸ್‌ ಸಾಮಾಜಿಕ ಮಾಧ್ಯಮ ತಂಡಕ್ಕೆ ಸಂಪನ್ಮೂಲ ಕೊರತೆ: ರಮ್ಯಾ

ಕೇಂಬ್ರಿಡ್ಜ್‌ : ‘ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ತಂಡಕ್ಕೆ ಬಿಜೆಪಿಯಂತೆ ಸಾಕಷ್ಟು ಸಂಪನ್ಮೂಲಗಳು ಲಭ್ಯವಿಲ್ಲ’ ಎಂದು ನಟಿ ಹಾಗೂ ಪಕ್ಷದ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್‌ ಕಮ್ಯುನಿಕೇಷನ್‌ ವಿಭಾಗದ ಮುಖ್ಯಸ್ಥೆ ರಮ್ಯಾ ಹೇಳಿದರು.

ಹಾರ್ವರ್ಡ್‌ ಕೆನಡಿ ಶಾಲೆಯಲ್ಲಿ ಆಯೋಜಿಸಿದ್ದ ‘ಭಾರತದ ರಾಜಕೀಯದಲ್ಲಿ ಸಾಮಾಜಿಕ ಮಾಧ್ಯಮ’ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ’ಬಿಜೆಪಿಗೆ ಅಪಾರ ಸಂಪನ್ಮೂಲ ಲಭ್ಯವಿದೆ. ಹೀಗಾಗಿ, ಆ ಪಕ್ಷ ಉತ್ತಮವಾಗಿ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳುತ್ತಿದೆ. ಆದರೆ, ಸಾಫ್ಟ್‌ವೇರ್‌ ಸೇರಿದಂತೆ ಹಲವು ಕೊರತೆಗಳು ನಮಗಿವೆ’ ಎಂದರು.

’ಇತಿಮಿತಿಗಳ ನಡುವೆಯೂ ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಅವರ ನೇತೃತ್ವದ ಸಾಮಾಜಿಕ ಮಾಧ್ಯಮ ತಂಡ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ’ ಎಂದು ಹೇಳಿದರು.

ರಾಹುಲ್‌ ಟ್ವೀಟ್‌ಗಳನ್ನು ಯಾರು ಬರೆಯುತ್ತಾರೆ ಎಂದು ಪದೇಪದೇ ಕೇಳಿದ ಪ್ರಶ್ನೆಗೆ ‘ರಾಹುಲ್‌ ಗಾಂಧಿ ಅವರೇ ಬರೆಯುತ್ತಾರೆ’ ಎಂದು ಅವರು

ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)