ಶುಕ್ರವಾರ, ಡಿಸೆಂಬರ್ 6, 2019
24 °C

ಐಎಸ್‌ಎಲ್‌: ಪುಣೆ ಸಿಟಿ ತಂಡಕ್ಕೆ ಜಯ

Published:
Updated:
ಐಎಸ್‌ಎಲ್‌: ಪುಣೆ ಸಿಟಿ ತಂಡಕ್ಕೆ ಜಯ

ಮುಂಬೈ: ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಎಫ್‌ಸಿ ಪುಣೆ ಸಿಟಿ ತಂಡ ಭಾನುವಾರದ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಪಂದ್ಯದಲ್ಲಿ ಜಯದಾಖಲಿಸಿದೆ.

ಪುಣೆ ತಂಡ 2–0 ಗೋಲುಗಳಿಂದ ಮುಂಬೈ ಸಿಟಿ ಎಫ್‌ಸಿಗೆ ಸೋಲುಣಿಸಿದೆ. ಆಡಿದ 15 ಪಂದ್ಯಗಳಲ್ಲಿ ಪುಣೆ ತಂಡ ಒಂಬತ್ತರಲ್ಲಿ ಗೆದ್ದಿದೆ. ಒಂದು ಪಂದ್ಯ ಡ್ರಾ ಮಾಡಿಕೊಂಡಿದ್ದು, ಐದರಲ್ಲಿ ಸೋತಿದೆ.

ಡೀಗೊ ಕಾರ್ಲೋಸ್‌ 18ನೇ ನಿಮಿಷದಲ್ಲಿ ಪುಣೆ ತಂಡಕ್ಕೆ ಗೋಲಿನ ಆರಂಭ ತಂದುಕೊಟ್ಟರು. ಮಾರ್ಸೆಲೊ ಪೆರೇರಾ 83ನೇ ನಿಮಿಷದಲ್ಲಿ ತಂಡದ ಎರಡನೇ ಗೋಲು ದಾಖಲಿಸುವ ಮೂಲಕ ಗೆಲುವನ್ನು ಖಚಿತಪಡಿಸಿದರು. ರಕ್ಷಣಾತ್ಮಕವಾಗಿ ಆಡಿದ ಮುಂಬೈ ತಂಡ ಕೊನೆಯ ನಿಮಿಷಗಳಲ್ಲಿ ವೇಗವಾಗಿ ಆಡಿತು. ಆದರೆ ತವರಿನ ಅಂಗಳದಲ್ಲಿ ಜಯದಾಖಲಿಸುವ ಅವಕಾಶವನ್ನು ಈ ತಂಡ ಕಳೆದುಕೊಂಡಿತು.

ಪ್ರತಿಕ್ರಿಯಿಸಿ (+)