‘ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಜೀವನ ಶೈಲಿ ಬದಲಿಸಿಲ್ಲ’

7

‘ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಜೀವನ ಶೈಲಿ ಬದಲಿಸಿಲ್ಲ’

Published:
Updated:
‘ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಜೀವನ ಶೈಲಿ ಬದಲಿಸಿಲ್ಲ’

ದೋಹಾ: ‘ಆಸ್ಟ್ರೇಲಿಯಾ ಓಪನ್‌ನಲ್ಲಿ ಪ್ರಶಸ್ತಿ ಗೆದ್ದ ಬಳಿಕ ನನ್ನ ಜೀವನ ಶೈಲಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ’ ಎಂದು ಡೆನ್ಮಾರ್ಕ್‌ನ ಟೆನಿಸ್‌ ಆಟಗಾರ್ತಿ ಕರೊಲಿನಾ ವೋಜ್ನಿಯಾಕಿ ಹೇಳಿದ್ದಾರೆ.

ಸೋಮವಾರದಿಂದ ಆರಂಭವಾಗಲಿರುವ ಕತಾರ್ ಓಪನ್ ಕುರಿತು ವೋಜ್ನಿಯಾಕಿ ಮಾತನಾಡಿದರು. ಆಸ್ಟ್ರೇಲಿಯಾ ಓಪನ್‌ ರನ್ನರ್‌ ಅಪ್‌ ಸಿಮೊನಾ ಹಲೆಪ್‌ ಕೂಡ ಈ ಟೂರ್ನಿಯಲ್ಲಿ ಆಡಲಿದ್ದಾರೆ.

‘ಮೊದಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ನನ್ನ ಬದುಕು ಬದಲಿಸಿಲ್ಲ. ಆಸ್ಟ್ರೇಲಿಯಾ ಓಪನ್ ಗೆದ್ದ ಬಳಿಕವೂ ನನ್ನ ಜೀವನ ಶೈಲಿ ಎಂದಿನಂತೆಯೇ ಇದೆ. ಅದೇ ದಿನಚರಿ ಮುಂದುವರಿದಿದೆ. ನಿತ್ಯ ಅಭ್ಯಾಸ ಮಾಡುವುದು ಕೂಡ ಮುಂದುವರಿದಿದೆ’ ಎಂದು ವೋಜ್ನಿಯಾಕಿ ಹೇಳಿದ್ದಾರೆ.

‘ಕತಾರ್‌ ಓಪನ್‌ನಲ್ಲಿ ಮೊದಲ ಶ್ರೇಯಾಂಕದೊಂದಿಗೆ ಆಡುತ್ತಿದ್ದೇನೆ. ಫೈನಲ್‌ ತಲುಪಿದರೆ ಮತ್ತೊಮ್ಮೆ ಸಿಮೊನಾ ಹಲೆಪ್‌ ಎದುರಾಗುವ ಸಾಧ್ಯತೆ ಇದೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry