ಮುಸ್ಲಿಂ ಕಾನೂನು ಮಂಡಳಿಯಿಂದ ಹೊರಬಂದ ನದವಿ

ಹೈದರಾಬಾದ್: ಅಯೋಧ್ಯೆಯ ವಿವಾದಾತ್ಮಕ ಜಾಗದಲ್ಲಿ ರಾಮಮಂದಿರ ನಿರ್ಮಾಣದ ಪರ ಒಲವು ವ್ಯಕ್ತಪಡಿಸಿದ್ದ ಮೌಲಾನಾ ಸೈಯದ್ ಸಲ್ಮಾನ್ ಹುಸೇನ್ ನದವಿ ನಿರೀಕ್ಷೆಯಂತೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯಿಂದ (ಎಐಎಂಪಿಎಲ್ಬಿ) ಹೊರಬಿದ್ದಿದ್ದಾರೆ.
‘ಮಸೀದಿ ಸ್ಥಳಾಂತರಕ್ಕೆ ಶರಿಯಾದಲ್ಲಿ ಅವಕಾಶವಿದೆ’ ಎಂದು ಎಐಎಂಪಿಎಲ್ಬಿ ಸಭೆಯಲ್ಲಿ ಪ್ರತಿಪಾದಿಸುವ ಮೂಲಕ ಮಂಡಳಿ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಅವರ ಈ ನಿಲುವನ್ನು ಮಂಡಳಿ ಒಪ್ಪಿರಲಿಲ್ಲ. ಇದಕ್ಕೂ ಮೊದಲು ಅವರು ಅಯೋಧ್ಯೆ ವಿವಾದದ ಮಧ್ಯಸ್ಥಿಕೆ ವಹಿಸಿರುವ ಶ್ರೀ ಶ್ರೀ ರವಿಶಂಕರ್ ಅವರನ್ನು ಭೇಟಿಯಾಗಿದ್ದರು.
ಪ್ರತಿಕ್ರಿಯಿಸಿ (+)