ಶುಕ್ರವಾರ, ಡಿಸೆಂಬರ್ 13, 2019
27 °C

ರದ್ದಾದ ನೋಟುಗಳ ಪರಿಶೀಲನೆ ಇನ್ನೂ ಮುಗಿದಿಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

ರದ್ದಾದ ನೋಟುಗಳ ಪರಿಶೀಲನೆ ಇನ್ನೂ ಮುಗಿದಿಲ್ಲ

ನವದೆಹಲಿ: ₹500 ಮತ್ತು ₹1000 ಮುಖಬೆಲೆಯ ನೋಟುಗಳ ರದ್ದತಿಯಾಗಿ 15 ತಿಂಗಳು ಕಳೆದಿದೆ. ಬ್ಯಾಂಕ್‌ಗಳಿಗೆ ಹಿಂದಿರುಗಿಸಲಾಗಿರುವ ರದ್ದಾದ  ನೋಟುಗಳ ನಿಖರ ಮೌಲ್ಯ ಎಷ್ಟು ಮತ್ತು ಅವುಗಳಲ್ಲಿ ಖೋಟಾ ನೋಟುಗಳು ಇವೆಯೇ ಎಂಬುದನ್ನು ಪರಿಶೀಲಿಸುವ ಕೆಲಸ ಇನ್ನೂ ಪೂರ್ಣಗೊಂಡಿಲ್ಲ ಎಂದು ಆರ್‌ಬಿಐ ಹೇಳಿದೆ.

‘ಶೀಘ್ರಗತಿಯಲ್ಲಿ’ ಈ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಆರ್‌ಬಿಐ ತಿಳಿಸಿದೆ. ಆದರೆ ಪರಿಶೀಲನೆ ಯಾವಾಗ ಮುಗಿಯಬಹುದು ಎಂಬ ಬಗ್ಗೆ ಏನನ್ನೂ ಹೇಳಿಲ್ಲ.

2017 ಜೂನ್ 30ರವರೆಗಿನ ಮಾಹಿತಿ ಪ್ರಕಾರ ಬ್ಯಾಂಕ್‌ಗಳಿಗೆ ಬಂದಿರುವ ರದ್ದಾದ ನೋಟುಗಳ ಮೌಲ್ಯ ₹15.28 ಲಕ್ಷ ಕೋಟಿ.

ಪ್ರತಿಕ್ರಿಯಿಸಿ (+)