ಬಾಂಬ್ ಸ್ಫೋಟಿಸಿ ಯೋಧನ ಹತ್ಯೆ

7

ಬಾಂಬ್ ಸ್ಫೋಟಿಸಿ ಯೋಧನ ಹತ್ಯೆ

Published:
Updated:

ರಾಯಪುರ: ವಿಜಾಪುರ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ ನಕ್ಸಲರು ಸುಧಾರಿತ ಬಾಂಬ್‌ ಸ್ಫೋಟಿಸಿ ಯೋಧರೊಬ್ಬರನ್ನು ಹತ್ಯೆ ಮಾಡಿದ್ದಾರೆ.

ರಾಜಧಾನಿಯಿಂದ 500 ಕಿ. ಮೀ. ದೂರದಲ್ಲಿರುವ ತಿಪ್ಪಾಪುರಂ ಅರಣ್ಯದಲ್ಲಿ ನಕ್ಸಲರ ವಿರುದ್ಧ ಜಿಲ್ಲಾ ಮೀಸಲು ಪಡೆಯು (ಡಿಆರ್‌ಜಿ) ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಬಾಂಬ್‌ ಸ್ಫೋಟಗೊಂಡಿದೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ.

ತೆಲಂಗಾಣ ಗಡಿಯಲ್ಲಿ ಕಾರ್ಯಾಚಣೆ ನಡೆಸಿದ್ದು, ಅಲ್ಲಿ ಹುದಗಿಸಿಟ್ಟಿದ್ದ ಬಾಂಬ್‌ ಅನ್ನು ಕಾನ್‌ಸ್ಟೆಬಲ್‌ ಆಕಸ್ಮಿಕವಾಗಿ ತುಳಿದ ಪರಿಣಾಮ ಸ್ಫೋಟಗೊಂಡಿದೆ ಎಂದು ಹೇಳಿದ್ದಾರೆ. ಮೃತ ಯೋಧನನ್ನು ಸೋಂದಾರ್‌ ಹೇಮ್ಲಾ ಎಂದು ಗುರುತಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry