ಗರಗದಹಳ್ಳಿ:ಬೋನಿಗೆ ಬಿದ್ದ ಚಿರತೆ

7

ಗರಗದಹಳ್ಳಿ:ಬೋನಿಗೆ ಬಿದ್ದ ಚಿರತೆ

Published:
Updated:
ಗರಗದಹಳ್ಳಿ:ಬೋನಿಗೆ ಬಿದ್ದ ಚಿರತೆ

ಅಜ್ಜಂಪುರ: ಪಟ್ಟಣ ಸಮೀಪ ಗರಗದಹಳ್ಳಿ ಗ್ರಾಮದ ಬಳಿ ಇರಿಸಲಾಗಿದ್ದ ಬೋನಿಗೆ ಭಾನುವಾರ ಚಿರತೆಯೊಂದು ಬಿದ್ದಿದೆ.

ಕೆಲ ದಿನಗಳ ಹಿಂದೆ ಇದೇ ಗ್ರಾಮ ವ್ಯಾಪ್ತಿಯಲ್ಲಿ ಚಿರತೆಯೊಂದು ಸೆರೆಯಾಗಿತ್ತು. ಮತ್ತಷ್ಟು ಚಿರತೆಗಳು ಇರುವುದಾಗಿ ಸಂಶಯ ವ್ಯಕ್ತಪಡಿಸಿದ್ದ ಗ್ರಾಮಸ್ಥರು, ಅವುಗಳು ಸೆರೆಯಾಗುವವರೆಗೂ ಬೋನುಗಳನ್ನು ಇರಿಸುವಂತೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮನವಿ ಮಾಡಿದ್ದರು.

ಮನವಿ ತಿರಸ್ಕರಿಸಿದ್ದರಿಂದ ಗ್ರಾಮಸ್ಥರೇ ಅರಣ್ಯ ಇಲಾಖೆಯಲ್ಲಿದ್ದ ಬೋನನ್ನು ತಂದು ಆಯಕಟ್ಟಿನ ಸ್ಥಳಗಳಲ್ಲಿ ಇರಿಸಿ, ನಿಗಾ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry