ಬುಧವಾರ, ಡಿಸೆಂಬರ್ 11, 2019
15 °C

ಅಪರಿಚಿತರಿಂದ ಬಳೆ ಹಾಕಿಸಿಕೊಳ್ಳದಂತೆ ಫತ್ವಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪರಿಚಿತರಿಂದ ಬಳೆ ಹಾಕಿಸಿಕೊಳ್ಳದಂತೆ ಫತ್ವಾ

ಲಖನೌ: ‘ಮುಸ್ಲಿಂ ಮಹಿಳೆಯರು ತಮ್ಮ ರಕ್ತಸಂಬಂಧಿಗಳ ಹೊರತು ಬೇರೆ ಯಾರಿಂದಲೂ ಬಳೆಗಳನ್ನು ಹಾಕಿಸಿಕೊಳ್ಳಬಾರದು’ ಎಂದು ದಾರುಲ್‌ ಉಲೂಮ್‌ ಧಾರ್ಮಿಕ ಕೇಂದ್ರ ಫತ್ವಾ ಹೊರಡಿಸಿದೆ.

‘ಅಪರಿಚಿತ ವ್ಯಕ್ತಿಯಿಂದ ಬಳೆಗಳನ್ನು ಹಾಕಿಸಿಕೊಳ್ಳುವುದು ಇಸ್ಲಾಂಗೆ ವಿರುದ್ಧ’ ಎಂದು ತಿಳಿಸಿದೆ.

ವ್ಯಕ್ತಿಯೊಬ್ಬರು ಈ ಸಂಬಂಧ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಕೇಂದ್ರವು ‘ಮುಸ್ಲಿಂ ಮಹಿಳೆಯರು ಬಳೆಗಳನ್ನು ತೊಡಲು ಅವಕಾಶವಿದೆ. ಆದರೆ, ಸ್ವತಃ ಬಳೆಗಳನ್ನು ತೊಟ್ಟುಕೊಳ್ಳಬೇಕು ಇಲ್ಲವೇ ರಕ್ತಸಂಬಂಧಿಗಳಿಂದ ಹಾಕಿಸಿಕೊಳ್ಳಬೇಕು’ ಎಂದು ಸ್ಪಷ್ಟಪಡಿಸಿದೆ.

ಬಿಗಿಯಾದ ಬುರ್ಖಾ ಧರಿಸದಂತೆಯೂ ಕೇಂದ್ರದಿಂದ ಈ ಹಿಂದೆ ಫತ್ವಾ ಹೊರಡಿಸಲಾಗಿತ್ತು. ಇಂತಹ ಹಲವು ಫತ್ವಾಗಳಿಗೆ ಮುಸ್ಲಿಂ ಸಮುದಾಯದವರಿಂದಲೇ ತೀವ್ರ ವಿರೋಧ ವ್ಯಕ್ತವಾಗಿತ್ತು.

ಪ್ರತಿಕ್ರಿಯಿಸಿ (+)