ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಪ್ಪಿನಕಾಯಿ: ಶೇ 5ರ ತೆರಿಗೆ ವ್ಯಾಪ್ತಿಗೆ ತನ್ನಿ’

Last Updated 11 ಫೆಬ್ರುವರಿ 2018, 20:22 IST
ಅಕ್ಷರ ಗಾತ್ರ

ಬೆಂಗಳೂರು: ‘ಉಪ್ಪಿನಕಾಯಿಗೆ ಈಗಿರುವ ಶೇ 12ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಯಿಂದ ಶೇ 5ರ ತೆರಿಗೆ ವ್ಯಾಪ್ತಿಗೆ  ತರಬೇಕು’ ಎಂದು ಒತ್ತಾಯಿಸಲು ಉಪ್ಪಿನಕಾಯಿ ಉದ್ಯಮಿಗಳು ನಿರ್ಧರಿಸಿದ್ದಾರೆ.

ವಿವಿಧ ರಾಜ್ಯಗಳಲ್ಲಿರುವ ಉದ್ಯಮಿಗಳು ನಗರದಲ್ಲಿ ಭಾನುವಾರ ಸೇರಿ, ಅಖಿಲ ಭಾರತ ಉಪ್ಪಿನಕಾಯಿ ತಯಾರಕರ ಸಂಘಕ್ಕೆ ಚಾಲನೆ ನೀಡಿದರು. ಕರ್ನಾಟಕ ಉಪ್ಪಿನಕಾಯಿ ಉದ್ಯಮಿಗಳ ಸಂಘ ಕರೆದಿದ್ದ ಮೊದಲ ಸಭೆಯಲ್ಲಿ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಉದ್ಯಮಿಗಳು ಪಾಲ್ಗೊಂಡಿದ್ದರು.

ಕೇಂದ್ರ ಸರ್ಕಾರ ಹೆಚ್ಚು ತೆರಿಗೆ ವಿಧಿಸುವ ಮೂಲಕ ಉಪ್ಪಿನಕಾಯಿ ಉದ್ಯಮದ ಬೇರುಗಳನ್ನೇ ಅಲುಗಾಡಿಸಲು ಹೊರಟಿದೆ. ನ್ಯಾಯ ಕೇಳಲು ನಾವೆಲ್ಲ ಸಂಘಟಿತರಾಗಿದ್ದೇವೆ ಎಂದು ಸಂಸ್ಥಾಪಕ ಅಧ್ಯಕ್ಷ ರಾಮಚಂದ್ರ ಶೆಟ್ಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT