13ಕ್ಕೆ ‘ನಾದೋಪಾಸನೆ’

7

13ಕ್ಕೆ ‘ನಾದೋಪಾಸನೆ’

Published:
Updated:

ಬೆಂಗಳೂರು: ಭಾರತೀಯ ಅಭಿಮಾನ ವೆಲ್‍ಫೇರ್ ಟ್ರಸ್ಟ್ ವತಿಯಿಂದ ‘ನಾದೋಪಾಸನೆ' ಸಾಂಸ್ಕೃತಿಕ  ಕಾರ್ಯಕ್ರಮ ಬಸವನಗುಡಿಯ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಫೆ.13ರಂದು ಸಂಜೆ 5 ಗಂಟೆಗೆ ನಡೆಯಲಿದೆ.

ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್‌ನ ಅಧ್ಯಕ್ಷ ಬಿ.ವಿ.ಜಯರಾಂ, ‘ಮಹಾಶಿವರಾತ್ರಿ ಪ್ರಯುಕ್ತ ಅಹೋರಾತ್ರಿ ಕಾರ್ಯಕ್ರಮಗಳು ನಡೆಯುತ್ತವೆ. ಕಾರ್ಯಕ್ರಮವನ್ನು ಕೆ.ಮೋಹನ ಆಳ್ವ ಉದ್ಘಾಟಿಸುತ್ತಾರೆ. ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ ಅಧ್ಯಕ್ಷತೆ ವಹಿಸುತ್ತಾರೆ’ ಎಂದರು.

ಓಂಕಾರ ಆಶ್ರಮದಲ್ಲಿ ಜನಪದ ಮೇಳ

ಓಂಕಾರ ಆಶ್ರಮ ಮಹಾಸಂಸ್ಥಾನದ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಫೆ.13 ರಂದು ರಥೋತ್ಸವ ಪಲ್ಲಕ್ಕಿ ಉತ್ಸವ, ಭಜನೆ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಮಠದ ಮಧುಸೂಧನಾನಂದ ಪುರಿ ತಿಳಿಸಿದರು.

ಇಲ್ಲಿ ‍ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮಹಾಶಿವರಾತ್ರಿಯ ಪ್ರಯುಕ್ತ  ಜನಪದ ಮೇಳ ಆಯೋಜಿಸಿದ್ದೇವೆ. ಭಕ್ತರು ಓಂಕಾರೇಶ್ವರನಿಗೆ ಗಂಗಾಜಲಾಭಿಷೇಕ ಮಾಡಬಹುದು. ಶಿವರಾತ್ರಿಯ ಬೆಳಿಗ್ಗೆ 6ರಿಂದ ಮರುದಿನ ಬೆಳಿಗ್ಗೆ 6ರವರೆಗೆ ದೇವರ ದರ್ಶನ ಪಡೆಯಬಹುದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry