ಶಿರಸಿಯಲ್ಲಿ ಅಂಗಡಿಗೆ ಬೆಂಕಿ: ₹10 ಲಕ್ಷ ಮೌಲ್ಯದ ವಸ್ತುಗಳು ಅಗ್ನಿಗೆ ಆಹುತಿ

7

ಶಿರಸಿಯಲ್ಲಿ ಅಂಗಡಿಗೆ ಬೆಂಕಿ: ₹10 ಲಕ್ಷ ಮೌಲ್ಯದ ವಸ್ತುಗಳು ಅಗ್ನಿಗೆ ಆಹುತಿ

Published:
Updated:

ಶಿರಸಿ: ಅಂಗಡಿಗೆ ಆಕಸ್ಮಿಕ ಬೆಂಕಿಬಿದ್ದು ಅಂಗಡಿಯಲ್ಲಿದ್ದ ವಸ್ತುಗಳು ಭಸ್ಮಗೊಂಡಿವೆ.

ಇಲ್ಲಿನ ನಿಲೇಕಣಿಯಲ್ಲಿರುವ ವಾಮನ ಮೂಡಲಗಿ ಅವರಿಗೆ ಸೇರಿದ ಜಾಗದಲ್ಲಿ ತಿಮ್ಮಪ್ಪ ರಾಮಚಂದ್ರ ಕುಮಟಾ ಅಂಗಡಿ ನಡೆಸುತ್ತಿದ್ದರು. ಈ ಅಂಗಡಿಯಲ್ಲಿ ರಾತ್ರಿ 10.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು.

ಅಂಗಡಿ ಒಳಗಿದ್ದ ₹15ಸಾವಿರ ನಗದು, ₹10ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

ಸಮೀಪದಲ್ಲಿಯೇ ಪೆಟ್ರೋಲ್ ಬಂಕ್ ಇದ್ದಿದ್ದರಿಂದ ಬೆಂಕಿಯ ಜ್ವಾಲೆ ಜೋರಾಗುತ್ತಿದ್ದಂತೆ ಸುತ್ತಲಿನ ಜನ ಆತಂಕಗೊಂಡರು. ತಕ್ಷಣ‌ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಯಶಸ್ವಿಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry