ಬುಧವಾರ, ಡಿಸೆಂಬರ್ 11, 2019
26 °C

ರಾಹುಲ್ ಗಾಂಧಿ ಸಾಗುತ್ತಿದ್ದ ಬಸ್‌ ತಡೆದು ಕಪ್ಪು ಬಾವುಟ ಪ್ರದರ್ಶನ: ವಿಡಿಯೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಹುಲ್ ಗಾಂಧಿ ಸಾಗುತ್ತಿದ್ದ ಬಸ್‌ ತಡೆದು ಕಪ್ಪು ಬಾವುಟ ಪ್ರದರ್ಶನ: ವಿಡಿಯೊ

ಸಿಂಧನೂರು (ರಾಯಚೂರು ಜಿಲ್ಲೆ): ಜನಾಶೀರ್ವಾದ ಯಾತ್ರೆ ಕೈಗೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಭಾನುವಾರ ಸಿಂಧನೂರಿನಲ್ಲಿ ದಲಿತ ಸಂಘಟನೆಗಳ ಕಾರ್ಯಕರ್ತರು ರಾಹುಲ್ ಗಾಂಧಿ ಅವರಿದ್ದ ಬಸ್ ಎದುರು ಕಪ್ಪು ಬಾವುಟ ಪ್ರದರ್ಶನ ಮಾಡಿದರು.

ನ್ಯಾ. ಸದಾಶಿವ ವರದಿ ಜಾರಿಗೊಳಿಸಲು ಒತ್ತಾಯಿಸಿ ಮಾದಿಗ ಹಾಗೂ ಚಲುವಾದಿ ಸಮುದಾಯಗಳ ವಿವಿಧ ಸಂಘಟನೆಗಳೆಲ್ಲವೂ ಒಂದುಗೂಡಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಬಿಗಿ ಭದ್ರತೆಯ ನಡುವೆ ಸಾಗುತ್ತಿದ್ದ ರಾಹುಲ್‌ ಗಾಂಧಿ ಅವರಿದ್ದ ಬಸ್‌ ಅನ್ನು ಮಾರ್ಗ ಮಧ್ಯದಲ್ಲಿ ತಡೆದ ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಘೋಷಣೆ ಕೂಗಿದರು. ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ಪ್ರತಿಭಟನಾಕಾರರನ್ನು ಸ್ಥಳದಿಂದ ಚದುರಿಸಿದರು.

ಪ್ರತಿಕ್ರಿಯಿಸಿ (+)