ಪೊಲೀಸ್ ರಕ್ಷಣೆಯಲ್ಲಿ ಮನೆ ಸೇರಿದ ದಂಪತಿ

7

ಪೊಲೀಸ್ ರಕ್ಷಣೆಯಲ್ಲಿ ಮನೆ ಸೇರಿದ ದಂಪತಿ

Published:
Updated:
ಪೊಲೀಸ್ ರಕ್ಷಣೆಯಲ್ಲಿ ಮನೆ ಸೇರಿದ ದಂಪತಿ

ಮದ್ದೂರು: ವಧುವಿನ ಪೋಷಕರ ವಿರೋಧದ ನಡುವೆ ಮದುವೆಯಾಗಿ ನಾಪತ್ತೆಯಾಗಿದ್ದ ಅಂತರ್‌ ಧರ್ಮೀಯ ದಂಪತಿ, ಪೊಲೀಸರ ರಕ್ಷಣೆಯಲ್ಲಿ ಸುರಕ್ಷಿತವಾಗಿ ವರನ ಮನೆ ಸೇರಿದ್ದಾರೆ.

ಪಟ್ಟಣದ ಲೀಲಾವತಿ ಬಡಾವಣೆಯ 4ನೇ ಅಡ್ಡರಸ್ತೆಯ ಶೇಖ್‌ ಮಕ್ಬುಲ್‌ ಅವರ ಪುತ್ರಿ ಆಶಿಯಾ (19) ಹಾಗೂ ತಾಲ್ಲೂಕಿನ ವಡ್ಡರದೊಡ್ಡಿಯ ದಾಸಪ್ಪ ಅವರ ಪುತ್ರ ಅಕ್ಷಯ್‌ಕುಮಾರ್‌ (21) ಜ.25ರಂದು ಬೆಂಗಳೂರಿನ ಯಶವಂತಪುರದ ದೇವಾಲಯವೊಂದರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ತಾಲ್ಲೂಕಿನ ಸೋಮನಹಳ್ಳಿಯ ಸಿದ್ಧ ಉಡುಪು ಕಾರ್ಖಾನೆಯಲ್ಲಿ ಟೈಲರ್‌ ಕೆಲಸ ಮಾಡುತ್ತಿದ್ದ ಆಶಿಯಾಗೆ ಬೆಂಗಳೂರಿನ ಜೀನ್ಸ್‌ ಸ್ಟಿಚ್‌ವೇರ್‌ ಕಂಪನಿಯ ಉದ್ಯೋಗಿ ಅಕ್ಷಯಕುಮಾರ್‌ ಪರಿಚಯವಾಗಿ, ಪ್ರೇಮಾಂಕುರವಾಗಿತ್ತು. ಈ ವಿಷಯ ತಿಳಿದು ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು. ಬಳಿಕ ಆಶಿಯಾ ಅವರನ್ನು ಕೆಲಸ ಬಿಡಿಸಿದ ಪೋಷಕರು, ಮೈಸೂರಿನ ಜಾಮೀಯಾ ವಿದ್ಯಾರ್ಥಿ ನಿಯಲಕ್ಕೆ ಕುರಾನ್‌ ಕಲಿಕೆಗಾಗಿ ಸೇರಿಸಿದ್ದರು.

ಜ.21ರಂದು ಆಶಿಯಾ ಹಾಗೂ ಅಕ್ಷಯ್‌ ನಾಪತ್ತೆಯಾಗಿದ್ದರು. ಮಗಳನ್ನು ಹುಡುಕಿಕೊಡುವಂತೆ ಕೋರಿ ಪೋಷಕರು ಪಟ್ಟಣ ಪೊಲೀಸರಿಗೆ ದೂರು ನೀಡಿದ್ದರು. ಮೊಬೈಲ್‌ ಕರೆಗಳ ಬೆನ್ನು ಹತ್ತಿದ ಪೊಲೀಸರು, ಇಬ್ಬರನ್ನೂ ಯಶವಂತಪುರದ ಬಸ್‌ನಿಲ್ದಾಣದ ಬಳಿ ವಶಕ್ಕೆ ಪಡೆದು ಠಾಣೆಗೆ ಕರೆ ತಂದು ಹೇಳಿಕೆಗಳನ್ನು ದಾಖಲಿಸಿಕೊಂಡರು.

ಇಬ್ಬರೂ ಪ್ರಾಪ್ತ ವಯಸ್ಕರಾದುದರಿಂದ ಅವರ ಮದುವೆಗೆ ಸಮ್ಮತಿ ಸೂಚಿಸಿದ ಪೊಲೀಸರು, ಆಶಿಯಾ ಒಪ್ಪಿಗೆ ಮೇರೆಗೆ ಅಕ್ಷಯ್‌ ಮನೆಗೆ ಕಳಹಿಸಿಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry