ಶುಕ್ರವಾರ, ಡಿಸೆಂಬರ್ 13, 2019
27 °C

‘ಕಂಬಳ’ ಮಧ್ಯಂತರ ತಡೆಗೆ ಸುಪ್ರೀಂ ನಕಾರ

ಪಿಟಿಐ Updated:

ಅಕ್ಷರ ಗಾತ್ರ : | |

‘ಕಂಬಳ’ ಮಧ್ಯಂತರ ತಡೆಗೆ ಸುಪ್ರೀಂ ನಕಾರ

ನವದೆಹಲಿ: ರಾಜ್ಯದ ಕರಾವಳಿ ಜಿಲ್ಲೆಗಳ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ನೀಡಿರುವ ಅವಕಾಶಕ್ಕೆ ಮಧ್ಯಂತರ ತಡೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ರಾಜ್ಯದಲ್ಲಿ ಪ್ರತಿವರ್ಷ ನಡೆಯುವ ಕೋಣಗಳ ವಾರ್ಷಿಕ ಓಟದ ಸ್ಪರ್ಧೆಗೆ ತಡೆ ನೀಡುವಂತೆ ಸ್ವಯಂ ಸೇವಾ ಸಂಸ್ಥೆಯಾದ ‘ಪೆಟಾ ಇಂಡಿಯಾ’ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸೋಮವಾರ ನಡೆಯಿತು.

ಕಂಬಳಕ್ಕೆ ಮಧ್ಯಂತರ ತಡೆ ನೀಡಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂ ಕೋರ್ಟ್‌, ಈ ಕುರಿತ ಅಂತಿಮ ವಿಚಾರಣೆಯನ್ನು ಮಾರ್ಚ್‌ 12ರಂದು ನಿಗದಿ ಪಡಿಸಿದೆ.

ಕಂಬಳದಲ್ಲಿ ಹಿಂಸೆ ಇಲ್ಲ. ನೀರು ಮತ್ತು ಕೆಸರಿನ ಗದ್ದೆಗಳಲ್ಲಿ ನಡೆಯುವ ಕಂಬಳವು ಕೋಣಗಳ ಪಚನ ಕ್ರಿಯೆ ಮತ್ತು ದೇಹದ ಉಷ್ಣತೆ ನಿರ್ವಹಣೆಗೆ ನೆರವಾಗುತ್ತದೆ ಎಂದು ಈ ಹಿಂದೆ ರಾಜ್ಯ ಸರ್ಕಾರ ಹೇಳಿತ್ತು.

ಪ್ರತಿಕ್ರಿಯಿಸಿ (+)