‘ಬೆದರಿಕೆಗೆ ಹೆದರುವ ವ್ಯಕ್ತಿ ನಾನಲ್ಲ’

7

‘ಬೆದರಿಕೆಗೆ ಹೆದರುವ ವ್ಯಕ್ತಿ ನಾನಲ್ಲ’

Published:
Updated:

ಕೊಣನೂರು: ‘ಜನರ ಆಶೀರ್ವಾದ ದಿಂದ ಮಂತ್ರಿಯಾಗಿರುವ ನಾನು ಮತದಾರರಿಗೆ ಗೌರವಕೊಡುತ್ತೇನೆಯೇ ಹೊರತು ಬೆದರಿಕೆ ಹಾಕುವ, ಟೀಕೆ ಮಾಡುವ ರಾಜಕೀಯ ವಿರೋಧಿಗಳು ಯಾರೇ ಆಗಿದ್ದರೂ ಹೆದರುವುದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಪರೋಕ್ಷವಾಗಿ ದೇವೇಗೌಡ ಕುಟುಂಬದವರ ವಿರುದ್ಧ ಕಿಡಿಕಾರಿದರು.

ಪಟ್ಟಣದ ಆರ್ ಕೆ ಕನ್ವೆನ್ಷನ್ ಹಾಲ್‌ನಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಯ ಸಮಯದಲ್ಲಿ ಕಣ್ಣೀರು ಹಾಕಿಕೊಂಡು ವೋಟು ಗಿಟ್ಟಿಸಲು ಪ್ರಯತ್ನಿಸುವವರಿಗೆ ಮರುಳಾಗಬೇಡಿ ಎಂದು ಮನವಿ ಮಾಡಿದರು.

‘ಕಿರಿಯನಾದ ನನಗೆ ಮಾರ್ಗದ ರ್ಶನ ಮಾಡಿ ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡುವುದನ್ನು ಬಿಟ್ಟು ದೇವೇಗೌಡರು ದ್ವೇಷದ ರಾಜಕೀಯ ಮಾಡುತ್ತಾ ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದು ನನ್ನ ಮನಸ್ಸಿಗೆ ಬೇಸರ ತಂದಿದೆ’ ಎಂದು ಹೇಳಿದರು.

‘ನಾಲ್ಕು ಬಾರಿ ಸಂಸದರಾಗಿರುವ ದೇವೇಗೌಡರು ಸುಳ್ಳುಗಳನ್ನೇ ಜನರಿಗೆ ಸತ್ಯವೆಂದು ನಂಬಿಸುತ್ತಾ, ತಮ್ಮ ಸಂಸದರ ನಿಧಿಯಿಂದ ಆಗಬೇಕಾದ ಅಭಿವೃದ್ಧಿ ಕಾಮಗಾರಿಗಳನ್ನು ತಮ್ಮ ಮಗ ಮತ್ತು ಸೊಸೆಯ ರಾಜಕೀಯ ಬೆಳವಣಿಗೆಗೆ ಸಹಕರಿಸಿ ಅರಕಲಗೂಡು ತಾಲ್ಲೂಕು ಹಿಂದುಳಿಯುವಂತೆ ಮಾಡಿದ್ದಾರೆ’ ಎಂದು ದೂರಿದರು.

‘ ಎ.ಟಿ.ರಾಮಸ್ವಾಮಿ ಶಾಸಕರಾಗಿ ದ್ದಾಗ ತಾಲ್ಲೂಕಿನ ಅಭಿವೃದ್ಧಿಯನ್ನು ಮಾಡದೆ ಜಾರಿಗೆ ಬಾರದ ಬೆಂಗಳೂರು ಭೂಕಬಳಿಕೆ ವರದಿಯ ಹೆಸರು ಹೇಳಿ ಕೊಂಡು ಹಣ ಮಾಡಿಕೊಂಡು ಈಗ ತಮ್ಮ ನಾಟಕದ ಭಾಷಣದಲ್ಲಿ ಸುಳ್ಳು ಹೇಳಿಕೊಂಡು ಜನರನ್ನು ಓಲೈಕೆ ಮಾಡಲು ಬರುತ್ತಿದ್ದು, ನಾನು ಮಂತ್ರಿಯಾದ ನಂತರ ಆಗುತ್ತಿರುವ ಅಭಿವೃದ್ಧಿ ಕೆಲಸಗಳಿಗೆ ತಮ್ಮ ಪಕ್ಷದ ಹೆಸರನ್ನು ಹೇಳಿಕೊಳ್ಳುತ್ತಿರುವುದನ್ನು ಜನರು ಅರ್ಥಮಾಡಿಕೊಳ್ಳಬೇಕು’ ಎಂದರು.

‘ತಂಬಾಕು ಮಂಡಳಿ ಉಪಾಧ್ಯಕ್ಷ ನಾಗಿದ್ದ ಸಮಯದಲ್ಲಿ 22 ಸಾವಿರ ಜನರಿಗೆ ಮಂಡಳಿಯಿಂದ ತಂಬಾಕು ಬೆಳೆಯುವ ಪರವಾನಗಿಯನ್ನು ನೀಡಿ ದ್ದೇನೆ. ರಾಮಸ್ವಾಮಿಯವರು ಚಿಕ್ಕಪುಟ್ಟ ವಿಷಯಗಳಿಗೆ ಪ್ರತಿಭಟನೆ ಮಾಡುವ ಮೂಲಕ ಹೊಗೆಸೊಪ್ಪು ಬೆಳೆಗಾರರನ್ನು ಓಲೈಸಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ’ ಎಂದರು.

ಸಿದ್ದರಾಮಯ್ಯ ಅವರ ಜನಪರ ಯೋಜನೆಗಳಿಂದಾಗಿ ಕಾಂಗ್ರೆಸ್ ಪಕ್ಷವು 130 ಸೀಟುಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಸಚಿವ ಮಂಜು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ, ಹಾರಂಗಿ ಮಹಾಮಂಡಳದ ಅಧ್ಯಕ್ಷ ಎಸ್.ಸಿ.ಚೌಡೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೈರೇಗೌಡ, ಜಿ.ಪಂ ಸದಸ್ಯ ರೇವಣ್ಣ, ಮುಖಂಡ ಪುಟ್ಟೇಗೌಡ ಮಾತನಾಡಿದರು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಘುನಂದನ್, ಎಪಿಎಂಸಿ ಉಪಾಧ್ಯಕ್ಷ ಪುಟ್ಟರಾಜು, ಗ್ರಾ ಪಂ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry