ಮಂಗಳವಾರ, ಡಿಸೆಂಬರ್ 10, 2019
20 °C

ಭಾರತ ಸಾಹಿತ್ಯದ ಶ್ರೇಷ್ಠತೆ ಸಾರಲು ಪ್ರಯತ್ನಿಸುವೆ: ಡಾ.ಚಂದ್ರಶೇಖರ ಕಂಬಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತ ಸಾಹಿತ್ಯದ ಶ್ರೇಷ್ಠತೆ ಸಾರಲು ಪ್ರಯತ್ನಿಸುವೆ: ಡಾ.ಚಂದ್ರಶೇಖರ ಕಂಬಾರ

‌ನವದೆಹಲಿ: ಭಾರತ ಸಾಹಿತ್ಯದ ಶ್ರೇಷ್ಠತೆಯನ್ನು ಸಾರಲು ಪ್ರಯತ್ನಿಸುವುದಾಗಿ  ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹೇಳಿದರು.

‘ಕೇಂದ್ರ ಸಾಹಿತ್ಯ ಅಕಾಡೆಮಿಗೆ ಬಹುದೊಡ್ಡ ಪರಂಪರೆ ಇದೆ. ಬಹಳಷ್ಟು ಭಾಷೆಗಳನ್ನು ಒಂದುಗೂಡಿಸಿ ಸಾಗುತ್ತಿರುವ ದೇಶದ ಬಹುದೊಡ್ಡ ಬೌದ್ಧಿಕ ಸಂಸ್ಥೆಯನ್ನು ಮುನ್ನಡೆಸುವ ಅವಕಾಶ ದೊರೆತಿರುವುದು ಭಾಗ್ಯ. ಹಿಂದಿನ ಹಿರಿಯರಿಗೆ ಕಳಂಕ ಬಾರದಂತೆ ಹಾಗೂ  ಭಾರತ ಸಾಹಿತ್ಯದ ಶ್ರೇಷ್ಠತೆಯನ್ನು ಸಾರಲು ಪ್ರಯತ್ನಿಸುತ್ತೇನೆ’ ಎಂದರು.

ಅಕಾಡೆಮಿಯ ಈ ಹಿಂದಿನ ಅಧ್ಯಕ್ಷರು ಡಾ. ವಿಶ್ವನಾಥ ಪ್ರಸಾದ್ ತಿವಾರಿ. ಕನ್ನಡ ಸಾಹಿತಿಗಳ ಪೈಕಿ ವಿ.ಕೃ. ಗೋಕಾಕ,  ಡಾ.ಯು. ಆರ್. ಅನಂತಮೂರ್ತಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಪ್ರತಿಕ್ರಿಯಿಸಿ (+)