ಸೋಮವಾರ, ಡಿಸೆಂಬರ್ 9, 2019
22 °C

ಕಾಲೇಜ್ ಬಸ್ಸಿನಲ್ಲಿ ವಿದ್ಯಾರ್ಥಿನಿ ಎದುರು ಹಸ್ತಮೈಥುನ: ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ ಅಪರಿಚಿತ ವ್ಯಕ್ತಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಕಾಲೇಜ್ ಬಸ್ಸಿನಲ್ಲಿ ವಿದ್ಯಾರ್ಥಿನಿ ಎದುರು ಹಸ್ತಮೈಥುನ: ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ ಅಪರಿಚಿತ ವ್ಯಕ್ತಿ

ನವದೆಹಲಿ: ಅಪರಿಚಿತ ವ್ಯಕ್ತಿಯೊಬ್ಬ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿನಿ ಎದುರು ಕಾಲೇಜ್ ಬಸ್ಸಿನಲ್ಲಿ ಹಸ್ತಮೈಥುನ ಮೂಲಕ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ ಘಟನೆ ನಡೆದಿದೆ.ಈ ಬಗ್ಗೆ ಯುವತಿಯು ವಸಂತ ವಿಹಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತಾನು ಮಾಡಿದ ವಿಡಿಯೊವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಧ್ಯಾಹ್ನ ಸುಮಾರು 3.30 ರ ಸಮಯ. ಮನೆಗೆ ಹೋಗುವ ಸಲುವಾಗಿ ಕಾಲೇಜ್ ಬಸ್ಸಿನಲ್ಲಿ ಕುಳಿತಿದ್ದೆ. ಪುಸ್ತಕ ಓದುತ್ತಾ ಕುಳಿತಿದ್ದಾಗ ನಾನು ಕುಳಿತ ಸೀಟು ಅಲುಗಾಡಿದಂತಾಯ್ತು. ತಕ್ಷಣ ಪುಸ್ತಕ ಓದುವುದನ್ನು ಬಿಟ್ಟು ಗಮನಿಸಿದಾಗ ಅಪರಿಚಿತ ವ್ಯಕ್ತಿಯೊಬ್ಬ ಪಕ್ಕದಲ್ಲಿ ಕುಳಿತು ಅನುಚಿತವಾಗಿ ವರ್ತಿಸುವುದು ಅರಿವಿಗೆ ಬಂತು. ತಕ್ಷಣ ಆತನ ಈ ನೀಚ ವರ್ತನೆಯನ್ನು ಮೊಬೈಲಿನಲ್ಲಿ ಸೆರೆಹಿಡಿದೆ ಎಂದು ಯುವತಿಯು ಘಟನೆ ಬಗ್ಗೆ ವಿವರಿಸಿದ್ದಾರೆ.

ಬಸ್ಸಿನಲ್ಲಿದ್ದ ಯಾರೊಬ್ಬರು ತಮ್ಮ ನೆರವಿಗೆ ಬರಲಿಲ್ಲ ಎಂದೂ ಯುವತಿ ಬೇಸರ ವ್ಯಕ್ತಪಡಿಸಿದ್ದಾರೆ.

ಘಟನೆ ಬಗ್ಗೆ ಕುಟುಂಬದವರಿಗೆ ತಿಳಿಸಿದೆ. ಆದರೆ ಇದರ ಬಗ್ಗೆ ಮಾತನಾಡಲು ಅವರು ಹಿಂದೇಟು ಹಾಕಿದರು. ವಿದ್ಯಾವಂತ ಯುವತಿಯಾಗಿ ನಾನೇ ಘಟನೆಯನ್ನು ಕಡೆಗಣಿಸಿದರೆ, ಲೈಂಗಿಕ ದೌರ್ಜನ್ಯದ ಬಗ್ಗೆ ಪೊಲೀಸರಿಗೆ ತಿಳಿಸಬೇಕೆಂದು ಅನ್ಯ ಮಹಿಳೆಯರಿಗೆ ನಾನು ಹೇಗೆ ಹೇಳಲು ಸಾಧ್ಯ? ಎಂದು ಹೇಳಿ ಆತನಿಗೆ ಶಿಕ್ಷೆಯಾಗಲೇಬೇಕು ಎಂದು ಒತ್ತಾಯಿಸಿದ್ದಾರೆ.

‘ಯುವತಿ ನೀಡಿದ ದೂರನ್ನು ದಾಖಲಿಸಿಕೊಂಡಿದ್ದೇವೆ. ಆರೋಪಿಯ ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಬಲೆ ಬೀಸಿದ್ದೇವೆ’ ಎಂದು ಡಿಸಿಪಿ ಮೋನಿಕಾ ಭಾರದ್ವಾಜ್ ತಿಳಿಸಿದ್ದಾರೆ.

ಒಂದು ನಿಮಿಷ ಅವಧಿಯ ವಿಡಿಯೊವನ್ನು ಘಟನೆ ನಡೆದ ದಿನವೇ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿ ಪೊಲೀಸರು ಹಾಗೂ ಆಡಳಿತಗಾರರನ್ನೂ ವಿಡಿಯೊ ಜತೆ ಟ್ಯಾಗ್ ಮಾಡಲಾಗಿದೆ. ಘಟನೆ ನಡೆದು ಐದು ಕಳೆದರೂ ಅಪರಿಚಿತ ಆರೋಪಿ ಪತ್ತೆಯಾಗಿಲ್ಲ. 

ಪ್ರತಿಕ್ರಿಯಿಸಿ (+)