ಗುರುವಾರ , ಮೇ 28, 2020
27 °C

ಮಸ್ಕತ್‌ನಲ್ಲಿ 125 ವರ್ಷ ಪುರಾತನ ಶಿವ ದೇವಾಲಯಕ್ಕೆ ಮೋದಿ ಭೇಟಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮಸ್ಕತ್‌ನಲ್ಲಿ 125 ವರ್ಷ ಪುರಾತನ ಶಿವ ದೇವಾಲಯಕ್ಕೆ ಮೋದಿ ಭೇಟಿ

ಮಸ್ಕತ್/ಒಮನ್:  ಪ್ರಧಾನಿ ನರೇಂದ್ರ ಮೋದಿ ಅವರು ಮಸ್ಕತ್‌ನ ಮತ್ರಾ ವಲಯದಲ್ಲಿರುವ 125 ವರ್ಷದ ಪುರಾತನ ಶಿವದೇವಾಲಯಕ್ಕೆ ಸೋಮವಾರ ಭೇಟಿ ನೀಡಿ ದರ್ಶನ ಪಡೆದರು.

'ಶಿವದೇವಾಲಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದದ್ದು ಅತೀವ ಸಂತಸ ತಂದಿದೆ' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಈ ಶಿವದೇವಾಲಯವನ್ನು 125 ವರ್ಷಗಳ ಹಿಂದೆ ಗುಜರಾತಿನ ವ್ಯಾಪಾರಿ ಸಮುದಾಯ ನಿರ್ಮಿಸಿತ್ತು. ಇದನ್ನು 1999ರಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ.

ಈ ದೇವಾಲಯದಲ್ಲಿ ಶ್ರೀ ಆದಿ ಮೋತೀಶ್ವರ ಮಹಾದೇವ, ಶ್ರೀ ಮೋತೀಶ್ವರ ಮಹಾದೇವ, ಶ್ರೀ ಹನುಮಾನ್‌ಜೀ ಮೂರ್ತಿಗಳಿವೆ. ಹಬ್ಬ ಹರಿದಿನಗಳಲ್ಲಿ 15 ಸಾವಿರಕ್ಕೂ ಹೆಚ್ಚು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

ಮೋದಿ ಭೇಟಿ ವೇಳೆ ಶಿವನಿಗೆ ಅಭಿಷೇಕ ಮಾಡಲಾಯಿತು. ಬಳಿಕ ದೇವಾಲಯ ಆಡಳಿತ ಮಂಡಳಿಯ ಸಿಬ್ಬಂದಿಯೊಂದಿಗೆ ಪರಸ್ಪರ ಮಾತುಕತೆ ನಡೆಸಿದರು ಎಂದು ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.