ಮಂಗಳವಾರ, ಡಿಸೆಂಬರ್ 10, 2019
20 °C

ಎಲ್ಲೆಡೆ ಸಲ್ಲುವ ಚಿತ್ರ ‘ಪ್ಯಾಡ್‌ಮನ್’

Published:
Updated:
ಎಲ್ಲೆಡೆ ಸಲ್ಲುವ ಚಿತ್ರ ‘ಪ್ಯಾಡ್‌ಮನ್’

ಪತಿ ಅಕ್ಷಯ್ ಕುಮಾರ್ ಅಭಿನಯದ ‘ಪ್ಯಾಡ್‌ಮನ್’ ಸಿನಿಮಾ ಎಲ್ಲೆಡೆಯೂ ಸಲ್ಲುವ ಚಿತ್ರ. ಜಗತ್ತಿನ ಯಾವುದೇ ಭಾಗದ ಹೆಂಗಳೆಯರ ಸಮಸ್ಯೆಯನ್ನು ಈ ಚಿತ್ರ ಬಿಂಬಿಸುತ್ತದೆ ಎಂದು ಅಕ್ಷಯ್ ಪತ್ನಿ, ನಟಿ ಟ್ವಿಂಕಲ್‌ ಖನ್ನಾ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ‘ಪ್ಯಾಡ್‌ಮನ್’ ಸಿನಿಮಾ ಪ್ರದರ್ಶನಕ್ಕೆ ನಿಷೇಧ ಹೇರಿರುವ ಕುರಿತು ಬೇಸರ ವ್ಯಕ್ತಪಡಿಸಿರುವ ಟ್ವಿಂಕಲ್, ಮುಟ್ಟಿನಂಥ ಸಮಸ್ಯೆಗೆ ಯಾವುದೇ ಭಾಷೆ, ದೇಶಗಳ ಗಡಿ ಇರುವುದಿಲ್ಲ. ಜಗತ್ತಿನೆಲ್ಲೆಡೆಯೂ ಮಹಿಳೆಯರ ಸಮಸ್ಯೆ ಒಂದೇ ಬಗೆಯದ್ದಾಗಿರುತ್ತದೆ’ ಎಂದಿದ್ದಾರೆ.

ಪಾಕಿಸ್ತಾನದ ಕೆಲ ಸಂಪ್ರದಾಯಗಳ ಕಾರಣಕ್ಕಾಗಿ ಈ ಸಿನಿಮಾ ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ. ಶೀಘ್ರದಲ್ಲೇ ಈ ನಿಷೇಧ ಹಿಂತೆಗೆದುಕೊಳ್ಳುವ ವಿಶ್ವಾಸವಿದೆ ಎಂದು ಹೇಳಿರುವ ‘ಪ್ಯಾಡ್‌ಮನ್’ ನಿರ್ದೇಶಕ ಆರ್. ಬಲ್ಕಿ, ಸಿನಿಮಾಕ್ಕೆ ನಿಷೇಧ ಹೇರಿರುವುದು ಮಾನವೀಯತೆಯ ಮೇಲಿನ ಪ್ರಹಾರ ಎಂದು ಬಣ್ಣಿಸಿದ್ದಾರೆ.

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ‘ಪ್ಯಾಡ್‌ಮನ್’ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇರಾನ್‌ನಂಥ ದೇಶದಲ್ಲಿ ಹಿಂದಿ ಸಿನಿಮಾವೊಂದಕ್ಕೆ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ದೊರಕಿರುವುದು ಸಂತಸದ ಸಂಗತಿ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)