ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18-02-2018

Last Updated 18 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

‘ಸೊನ್ನೆ’ ಸರದಿ ಈಗ ಇಂಗ್ಲೀಷಿಗೆ!
ಬೆಂಗಳೂರು, ಫೆ. 18–
ಸಂಯುಕ್ತ ಸಮಾಜವಾದಿ ಪಕ್ಷದ ಶ್ರೀ ಶಾಂತವೇರಿ ಗೋಪಾಲಗೌಡರು ಇಂದು ವಿದ್ಯಾರ್ಥಿಗಳಿಗೆ ನೀಡಿದ ಕರೆಯಿಂದ ರಾಜ್ಯ ಸರಕಾರವು ಭಾಷಾ ಸಮಸ್ಯೆಯ ಮತ್ತೊಂದು ಸ್ವರೂಪವನ್ನು ಸದ್ಯದಲ್ಲಿಯೇ ಎದುರಿಸಬೇಕಾಗಬಹುದು.

‘ಪರೀಕ್ಷೆಯಲ್ಲಿ ಇಂಗ್ಲೀಷ್‌ ಭಾಷಾಪತ್ರಿಕೆಯಲ್ಲಿ ಸೊನ್ನೆ ಬಂದರೂ ಪಾಸ್‌ ಮಾಡಿಸುವಂತೆ’ ಸರಕಾರವನ್ನು ಒತ್ತಾಯಪಡಿಸಬೇಕೆಂದು ಕರೆ ನೀಡಿದ್ದಾರೆ.

‘ಈ ಒತ್ತಾಯವನ್ನು ನಮ್ಮ ತರುಣರು ನಾಳೆಯಿಂದ ಸರಕಾರದ ಮುಂದೆ ಮಂಡಿಸುವರೆಂದು’ ಆಶಿಸಿದ್ದಾರೆ.

ಎಲ್ಲ ಹಂತಗಳಲ್ಲಿ ಕನ್ನಡ ಮಾಧ್ಯಮ
ಬೆಂಗಳೂರು, ಫೆ. 18–
ಶಿಕ್ಷಣ ಕ್ಷೇತ್ರದ ಎಲ್ಲ ಹಂತಗಳಲ್ಲಿಯೂ ಕನ್ನಡವು ಶಿಕ್ಷಣ ಮಾಧ್ಯಮವಾಗಬೇಕೆಂದು ಇಂದು ಇಲ್ಲಿ ಸೇರಿದ್ದ ರಾಜ್ಯ ಭಾಷಾ ಪರಿಷತ್ತಿನ ಪ್ರಥಮ ಸಮ್ಮೇಳನವು ಸರ್ವಾನುಮತದಿಂದ ನಿರ್ಣಯ ಮಾಡಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಮಂಡಿಸಿದ ನಿರ್ಣಯವನ್ನು ಶ್ರೀ ಎಸ್‌. ಗೋಪಾಲಗೌಡರು ಅನುಮೋದಿಸಿದರು.

ಪ್ರದೇಶಿಕ ಭಾಷೆ ಕಡ್ಡಾಯ, ಇಚ್ಛೆಯಿಂದ ಮತ್ತೊಂದು: ಕು.ವೆಂ.ಪು. ಅವರ ಸಲಹೆ
ಬೆಂಗಳೂರು, ಫೆ. 18–
‘ಪ್ರದೇಶಿಕ ಭಾಷೆ ಕಡ್ಡಾಯವಾಗಬೇಕು, ಬೇರೆ ಯಾವುದಾದರೊಂದು ಭಾಷೆಯನ್ನು ಐಚ್ಛಿಕವಾಗಿ ಕಲಿಯಲು ಅವಕಾಶವಿರಬೇಕು’. ಇದೇ ಇಂದಿನ ಸ್ಥಿತಿಯಲ್ಲಿ ಭಾಷಾ ಸಮಸ್ಯೆಯ ಪರಿಹಾರಕ್ಕೆ ಅನುಸರಿಸಬಹುದಾದ ರಾಜಮಾರ್ಗವೆಂದು ರಾಷ್ಟ್ರಕವಿ ಕು.ವೆಂ.ಪು.ರವರು ಇಂದು ಇಲ್ಲಿ ಘೋಷಿಸಿದರು.

‘ಎರಡನೇ ಭಾಷೆ ಯಾವುದಾದರೂ ಆಗಬಹುದು. ಇಂಗ್ಲೀಷ್‌, ಜರ್ಮನ್‌, ರಷ್ಯನ್‌, ಫ್ರೆಂಚ್‌ ಅಥವ ಹಿಂದಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT