ಸರ್ಕಾರಿ ಸ್ವಾಮ್ಯದ 8 ಕಂಪನಿಗಳು ಷೇರುಪೇಟೆಗೆ

7

ಸರ್ಕಾರಿ ಸ್ವಾಮ್ಯದ 8 ಕಂಪನಿಗಳು ಷೇರುಪೇಟೆಗೆ

Published:
Updated:

ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ಒಟ್ಟು 8 ಕಂಪನಿಗಳು ಮುಂದಿನ ಆರ್ಥಿಕ ವರ್ಷದಲ್ಲಿ ಷೇರುಪೇಟೆ ಪ್ರವೇಶಿಸಲಿವೆ.

ಹಿಂದುಸ್ತಾನ್‌ ಏರೊನಾಟಿಕ್ಸ್‌, ರೈಟ್ಸ್‌, ಎಚ್‌ಎಎಲ್‌, ಐಆರ್‌ಇಡಿಎ, ಭಾರತ್‌ ಡೈನಾಮಿಕ್ಸ್‌ ಮತ್ತು ಮಿಧನಿ ಕಂಪನಿಗಳು ಐಪಿಒ ಮೂಲಕ ಷೇರುಪೇಟೆಗೆ ಪ್ರವೇಶ ಪಡೆಯಲಿವೆ. ಇವುಗಳಲ್ಲಿ ಎಚ್‌ಎಎಲ್‌ ಈಗಾಗಲೇ ‘ಸೆಬಿ’ಯಿಂದ ಅನುಮತಿ ಪಡೆದಿದೆ.

ನೀಡಿಕೆ ಗಾತ್ರದ ಆಧಾರದ ಮೇಲೆ ಹಂತ ಹಂತವಾಗಿ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ)  ಬಿಡುಗಡೆ ಮಾಡಲಾಗುವುದು ಎಂದು ಹೂಡಿಕೆ ಮತ್ತು ಸಾರ್ವಜನಿಕ ಸಂಪತ್ತು ನಿರ್ವಹಣೆ ವಿಭಾಗದ ಕಾರ್ಯದರ್ಶಿ ನೀರಜ್‌ ಗುಪ್ತಾ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry