ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ ಕಡಲತೀರದಲ್ಲಿ ತಿಮಿಂಗಲದ ಮೃತದೇಹ ಪತ್ತೆ

Last Updated 18 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿ ಟ್ಯಾಗೋರ್ ಕಡಲ ತೀರದಲ್ಲಿ ಬೃಹತ್ ನೀಲಿ ತಿಮಿಂಗಲವೊಂದರ ಮೃತದೇಹ ಪತ್ತೆಯಾಗಿದೆ. ದೇಹ ಎರಡು ಭಾಗಗಳಾಗಿ ತುಂಡಾಗಿದ್ದು, ಒಂದು ಭಾಗ ರಾಕ್‌ ಗಾರ್ಡ್‌ ಸಮೀಪ, ಮತ್ತೊಂದು ಭಾಗ ದಿವೇಕರ್ ಕಾಲೇಜಿನ ಹಿಂಭಾಗದಲ್ಲಿ ಸಿಕ್ಕಿದೆ.

‘ತಿಮಿಂಗಲ ದೇಹವು 15 ಅಡಿ ಉದ್ದವಿದ್ದು, 14ರಿಂದ 16 ವರ್ಷ ಪ್ರಾಯದ್ದಾಗಿರಬಹುದು. ದೇಹ ಹಳದಿ ಬಣ್ಣಕ್ಕೆ ತಿರುಗಿದೆ. ದೇಹ ಸಂಪೂರ್ಣ ಕೊಳೆತಿರುವುದರಿಂದ ಸಾವಿನ ಸ್ಪಷ್ಟ ಕಾರಣ ಗೊತ್ತಾಗುವುದು ಕಷ್ಟ. ಮೂರು ದಿನಗಳ ಹಿಂದೆಯೇ ಮೃತಪಟ್ಟಿರಬಹುದು’ ಎಂದು ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಶಿವಕುಮಾರ ಹರಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಮುದ್ರದಲ್ಲಿ ತೇಲುತ್ತಿದ್ದ ಮೃತದೇಹವನ್ನು ಮೀನುಗಾರರು ಹಗ್ಗ ಕಟ್ಟಿ ದಡಕ್ಕೆ ತಂದು ಹಾಕಿರಬಹುದು’ ಎಂದು ಅವರು ತಿಳಿಸಿದರು. ಜೆಸಿಬಿ ಯಿಂದ ಕಡಲ ತೀರದಲ್ಲಿಯೇ ತಿಮಿಂಗಲ ದೇಹವನ್ನು ಹೂತು ಹಾಕಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT