ಶುಕ್ರವಾರ, ಡಿಸೆಂಬರ್ 6, 2019
25 °C

ಜೈನ್‌ ವಿಶ್ವವಿದ್ಯಾಲಯಕ್ಕೆ ಪ್ರಶಸ್ತಿ

Published:
Updated:
ಜೈನ್‌ ವಿಶ್ವವಿದ್ಯಾಲಯಕ್ಕೆ ಪ್ರಶಸ್ತಿ

ಬೆಂಗಳೂರು: ಜೈನ್ ವಿಶ್ವವಿದ್ಯಾಲಯ ತಂಡ ಬಿಜಿಎಸ್‌ ಕಪ್‌ಗಾಗಿ ಇಲ್ಲಿ ನಡೆದ ಅಖಿಲ ಭಾರತ ಅಂತರ ಕಾಲೇಜುಗಳ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ.

ಬಸವೇಶ್ವರ ನಗರದಲ್ಲಿರುವ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಜೈನ್ ವಿಶ್ವವಿದ್ಯಾಲಯ 79–64 ಪಾಯಿಂಟ್ಸ್‌ಗಳಿಂದ ಚೆನ್ನೈನ ಎಸ್‌ಆರ್‌ಎಮ್‌ ವಿಶ್ವವಿದ್ಯಾಲಯ ತಂಡವನ್ನು ಮಣಿಸಿದೆ. ವಿರಾಮದ ವೇಳೆಗೆ ಜೈನ್ ತಂಡ 41-36ರಲ್ಲಿ ಮುಂದಿತ್ತು.

ಪ್ರಶಸ್ತಿ ಗೆದ್ದ ಜೈನ್ ವಿ.ವಿ ತಂಡ ₹50,000 ಬಹುಮಾನ ಮೊತ್ತವನ್ನು ಪಡೆದುಕೊಂಡಿತು. ಈ ತಂಡದ ಧರಣಿ (24) ಹಾಗೂ ಸಿ.ನಿಖಿಲ್‌ (15) ಹೆಚ್ಚು ಪಾಯಿಂಟ್ಸ್ ಕಲೆಹಾಕಿದರು.

ಜೈನ್‌ ವಿ.ವಿ ತಂಡದ ಧರಣಿ ಕುಮಾರ್‌ ‘ಅತ್ಯುತ್ತಮ ಆಟಗಾರ’ ಪ್ರಶಸ್ತಿ ಪಡೆದರು.

ಪ್ರತಿಕ್ರಿಯಿಸಿ (+)