ಸ್ಪೇನ್‌ ಕ್ಲಬ್‌ನೊಂದಿಗೆ ಲವ ಕಪೂರ್‌ ಒಪ್ಪಂದ

7

ಸ್ಪೇನ್‌ ಕ್ಲಬ್‌ನೊಂದಿಗೆ ಲವ ಕಪೂರ್‌ ಒಪ್ಪಂದ

Published:
Updated:

ನವದೆಹಲಿ (ಪಿಟಿಐ): 19ರ ವಯೋಮಿತಿ ಒಳಗಿನ ಮಿಡ್‌ಫಿಲ್ಡರ್‌ ಲವ ಕಪೂರ್‌ ಅವರು ಸ್ಪೇನ್‌ನ ಪಲಮೋಸ್‌ ಫುಟ್‌ಬಾಲ್‌ ಕ್ಲಬ್‌ನೊಂದಿಗೆ ಸಹಿಹಾಕಿದ್ದಾರೆ. ಈ ಕ್ಲಬ್‌, ಕ್ಯಾಟಲೋನಿಯಾದಲ್ಲೇ ಅತ್ಯಂತ ಹಳೆಯ ಹಾಗೂ ಸ್ಪೇನ್‌ನಲ್ಲಿ ಮೂರನೇ ಅತ್ಯಂತ ಹಳೆಯ ಫುಟ್‌ಬಾಲ್‌ ಕ್ಲಬ್‌ ಎಂಬ ಕೀರ್ತಿ ಹೊಂದಿದೆ.

ಪಲಮೋಸ್‌ ಫುಟ್‌ಬಾಲ್‌ ಕ್ಲಬ್‌ ಸ್ಪ್ಯಾನಿಸ್‌ ಕ್ಲಬ್‌ಗಳಲ್ಲಿ 4ನೇ ಮಾದರಿಯಲ್ಲಿದೆ.( ಟೆರ್‌ಸೆರಾ ನಾಷಿಯನಲ್‌ ಡಿವಿಷನ್‌). ಭಾರತದ ಫುಟ್‌ಬಾಲ್‌ ಆಟಗಾರರೊಬ್ಬರಿಗೆ ಇದೇ ಮೊದಲ ಬಾರಿಗೆ ಸ್ಪ್ಯಾನಿಸ್‌ ಫುಟ್‌ಬಾಲ್‌ನಲ್ಲಿ ಸಿಕ್ಕ ಅತ್ಯಂತ ದೊಡ್ಡ ಗೌರವ ಇದಾಗಿದೆ. ಇಂಗ್ಲೆಂಡ್‌ ಹಾಗೂ ಫ್ರಾನ್ಸ್‌ನಲ್ಲಿ ಲವ ಕಪೂರ್‌ ಅವರು ಮೂರು ವರ್ಷ ತರಬೇತಿ ಪಡೆದಿದ್ದಾರೆ. ಇದಾದ ಬಳಿಕ ಅಖಿಲ ಭಾರತೀಯ ಫುಟ್‌ಬಾಲ್‌ ಫೆಡರೇಷನ್‌ಗೆ ವರ್ಗಾವಣೆಯಾಗಿದ್ದರು. ಸದ್ಯದಲ್ಲೇ ಕ್ಲಬ್‌ ಪರ ಚೊಚ್ಚಲ ಪಂದ್ಯವನ್ನಾಡಲಿದ್ದಾರೆ.

ಒಪ್ಪಂದದ ಪ್ರಕಾರ, ಫುಟ್‌ಬಾಲ್‌ನ ನಿರ್ದಿಷ್ಟ ಆವೃತ್ತಿಯಲ್ಲಿ ಲವ ಕಪೂರ್‌ ಆಡಲು ಅವಕಾಶ ಪಡೆದಿದ್ದಾರೆ. ಆದರೆ ಭಾರತದ ಒಬ್ಬ ಆಟಗಾರ ತನ್ನ ದೇಶದ ಕ್ಲಬ್‌ನಲ್ಲಿ ಆಟವಾಡಲು ಅವಕಾಶ ಪಡೆದಿರುವ ವಿಚಾರ ಸ್ಪೇನ್‌ನ ಮಾಧ್ಯಮಗಳಲ್ಲಿ ಪ್ರಮುಖವಾಗಿ ಗಮನಸೆಳೆದಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry