ಭಾನುವಾರ, ಡಿಸೆಂಬರ್ 8, 2019
24 °C

ಯುವ ಸಮುದಾಯಕ್ಕೆ ‘ಅಶ್ವಿನ್‌’ ಮಾದರಿ : ಕಿರ್ಮಾನಿ

Published:
Updated:
ಯುವ ಸಮುದಾಯಕ್ಕೆ ‘ಅಶ್ವಿನ್‌’ ಮಾದರಿ : ಕಿರ್ಮಾನಿ

ಚೆನ್ನೈ (ಪಿಟಿಐ): ಭಾರತ ತಂಡದ ಆಫ್‌ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಅವರ ಸಾಧನೆ ಹಾಗೂ ಆಟದಲ್ಲಿ ಅವರ ಶ್ರಮವೂ ಈಗಿನ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ ಎಂದು ಭಾರತ ತಂಡದ ಮಾಜಿ ವಿಕೆಟ್‌ ಕೀಪರ್‌ ಸೈಯದ್‌ ಕಿರ್ಮಾನಿ ಹೊಗಳಿದ್ದಾರೆ.

ರೋಟರಿ ಡಿಸ್ಟ್ರಿಕ್ಟ್‌ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಶ್ವಿನ್‌ಗೆ ‘ಐಕಾನ್‌ ಆಫ್‌ ದ ಚೆನ್ನೈ’ ಪ್ರಶಸ್ತಿ ನೀಡಿ ಮಾತನಾಡಿದ ಅವರು, ‘ಅಶ್ವಿನ್‌ ಸಾಧನೆ ಬಗ್ಗೆ ವಿವರಿಸಲು ನನಗೆ ಪದಗಳೇ ಸಿಗುತ್ತಿಲ್ಲ. ತಮಿಳುನಾಡು ಹಾಗೂ ಭಾರತಕ್ಕೆ ಹೆಮ್ಮೆ ತರುವ ಕೆಲಸ ಮಾಡಿದ್ದಾರೆ’ ಎಂದರು.

ಪ್ರತಿಕ್ರಿಯಿಸಿ (+)