ಶುಕ್ರವಾರ, ಡಿಸೆಂಬರ್ 13, 2019
27 °C

ದಾಖಲೆಯೊಂದಿಗೆ ಚಿನ್ನ ಗೆದ್ದ ಸೌಮ್ಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾಖಲೆಯೊಂದಿಗೆ ಚಿನ್ನ ಗೆದ್ದ ಸೌಮ್ಯಾ

ನವದೆಹಲಿ: ಅಮೋಘ ಸಾಮರ್ಥ್ಯ ತೋರಿದ ಬಿ.ಸೌಮ್ಯಾ, ರಾಷ್ಟ್ರೀಯ ನಡಿಗೆ ಚಾಂಪಿಯನ್‌ಷಿಪ್‌ನ ಮಹಿಳೆಯರ 20 ಕಿಲೊ ಮೀಟರ್ಸ್‌ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯುವ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಅರ್ಹತೆ ಗಳಿಸಿದ್ದಾರೆ.

ಭಾನುವಾರ ನಡೆದ ಫೈನಲ್‌ನಲ್ಲಿ ಸಿಆರ್‌ಪಿಎಫ್‌ ತಂಡವನ್ನು ಪ್ರತಿನಿಧಿಸಿದ್ದ ಸೌಮ್ಯಾ 1 ಗಂಟೆ, 31 ನಿಮಿಷ, 28.72 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು. ಇದರೊಂದಿಗೆ 2014ರಲ್ಲಿ ಟೈಕಾಂಗ್‌ನಲ್ಲಿ ನಡೆದಿದ್ದ ಕೂಟದಲ್ಲಿ ಖುಷ್ಬೀರ್‌ ಕೌರ್‌ (1:31:40.00ಸೆ) ನಿರ್ಮಿಸಿದ್ದ ದಾಖಲೆ ಅಳಿಸಿ ಹಾಕಿದರು.

ಇಂಚೆನ್‌ ಏಷ್ಯನ್‌ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದಿದ್ದ ಖುಷ್ಬೀರ್‌, ಇಲ್ಲಿಯೂ ಬೆಳ್ಳಿ ತಮ್ಮದಾಗಿಸಿಕೊಂಡರು. ಅವರು 1 ಗಂಟೆ, 32ನಿಮಿಷ, 16.96 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿದರು. ಕರಮ್‌ಜಿತ್‌ (1:34:08.60ಸೆ.) ಕಂಚಿಗೆ ತೃಪ್ತಿ ಪಟ್ಟರು.

ಪುರುಷರ ವಿಭಾಗದಲ್ಲಿ ಕೆ.ಟಿ.ಇರ್ಫಾನ್‌ ಚಿನ್ನಕ್ಕೆ ಕೊರಳೊಡ್ಡಿದರು. ಅವರು 1 ಗಂಟೆ, 21 ನಿಮಿಷ,31.25 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಹರಿಯಾಣದ ನೀರಜ್‌ (1:21:39.20ಸೆ.) ಮತ್ತು ಮನೀಷ್‌ ರಾವತ್‌ (1:23:31.72ಸೆ) ಕ್ರಮವಾಗಿ ಬೆಳ್ಳಿ ಮತ್ತು ಕಂಚು ತಮ್ಮದಾಗಿಸಿಕೊಂಡರು.

ಪ್ರತಿಕ್ರಿಯಿಸಿ (+)