ಬುಧವಾರ, ಡಿಸೆಂಬರ್ 11, 2019
24 °C

ದಕ್ಷಿಣ ಧ್ರುವಕ್ಕೆ ಹೊರಟ 13 ವರ್ಷದ ಬಾಲಕಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಕ್ಷಿಣ ಧ್ರುವಕ್ಕೆ ಹೊರಟ 13 ವರ್ಷದ ಬಾಲಕಿ!

ಬೆಂಗಳೂರು: ಅಮೆರಿಕದ ಪರಿಸರ ಹೋರಾಟಗಾರ ಸರ್‌ ರಾಬರ್ಟ್ ಸ್ವಾನ್‌ ನೇತೃತ್ವದ ‘2041 ಪ್ರತಿಷ್ಠಾನ’ ದಕ್ಷಿಣ ಧ್ರುವಕ್ಕೆ ಕೈಗೊಳ್ಳಲಿರುವ ‘ಅಂಟಾರ್ಕ್ಟಿಕಾ ಪರ್ಯಟನೆ’ಗೆ ಅಹಮದಾಬಾದ್‌ನ 13 ವರ್ಷದ ಬಾಲಕಿ ಆನ್ಯಾ ಸೋನಿ ಆಯ್ಕೆಯಾಗಿದ್ದಾಳೆ.

ದಕ್ಷಿಣ ಧ್ರುವ ಸಂರಕ್ಷಣೆ ಮತ್ತು ಹವಾಮಾನ ವೈಪರೀತ್ಯದ ಬಗ್ಗೆ ಅಧ್ಯಯನ ಮತ್ತು ಜಾಗೃತಿ ಮೂಡಿಸಲು 14 ವರ್ಷಗಳಿಂದ ಅಂಟಾರ್ಕ್ಟಿಕಾ ಯಾತ್ರೆ ಕೈಗೊಳ್ಳಲಾಗುತ್ತಿದೆ.

ವಿಶ್ವದ ನಾನಾ ರಾಷ್ಟ್ರಗಳಿಂದ 80 ಜನರನ್ನು ಈ ಪಯಣಕ್ಕೆ ಆಯ್ಕೆ ಮಾಡಲಾಗುತ್ತಿದ್ದು, ಭಾರತದಿಂದ ಇಬ್ಬರು ಮಾತ್ರ ಆಯ್ಕೆಯಾಗಿದ್ದಾರೆ. ಈ ಬಾರಿಯ ತಂಡದಲ್ಲಿ ಆನ್ಯಾ ಅತ್ಯಂತ ಚಿಕ್ಕವಳು. ಹೀಗಾಗಿ ಈಕೆಯ ತಾಯಿ ಪ್ರತಿಭಾ ಅವರೂ ಮಗಳ ಜತೆ ತೆರಳುತ್ತಿದ್ದಾರೆ.

ಪುಣೆಯ ಸಹ್ಯಾದ್ರಿ ಬೋರ್ಡಿಂಗ್‌ ಶಾಲೆಯ 8ನೇ ತರಗತಿಯಲ್ಲಿ ಓದುತ್ತಿ

ರುವ ಈ ಬಾಲಕಿ ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ಹೊಂದಿದ್ದು, ಸಾಮಾಜಿಕ ಚಟುವಟಿಕೆಗಳಲ್ಲಿಯೂ

ತೊಡಗಿಸಿಕೊಂಡಿದ್ದಾಳೆ.

ಅಂಟಾರ್ಕ್ಟಿಕಾ ತಲುಪುವುದು ಹೇಗೆ? ಇದೇ ಫೆ.20ರಂದು ಮುಂಬೈಯಿಂದ ಹೊರಡಲಿರುವ ಆನ್ಯಾ, ಅರ್ಜೆಂಟೀನಾದ ದಕ್ಷಿಣ ತುದಿಯಾದ ಉಷುವಾಯಿಯಾ ನಗರ ತಲುಪಲಿದ್ದಾಳೆ. ಅಲ್ಲಿಂದ ಫೆ. 28ರಂದು 80 ಜನರ ತಂಡ ಹಡಗಿನಲ್ಲಿ ದಕ್ಷಿಣ ಧ್ರುವ ಯಾತ್ರೆ ಆರಂಭಿಸಲಿದೆ. ಇದು 3,600 ಕಿ.ಮೀ ಸುದೀರ್ಘ ಪಯಣದ ಹಾದಿ.

ಜಾಗತಿಕ ತಾಪಮಾನ, ಹಿಮ ಕರಗುವಿಕೆ, ಜೀವ ವೈವಿಧ್ಯ ಕುರಿತು ಅಧ್ಯಯನ ನಡೆಸಲಿರುವ ತಂಡ ಮಾರ್ಚ್‌ 12ರಂದು ಮರು ಪಯಣ ಆರಂಭಿಸಲಿದೆ. ಬರುವಾಗ ದಕ್ಷಿಣ ಧ್ರುವದಲ್ಲಿಯ ಪ್ಲಾಸ್ಟಿಕ್‌ ಹಾಗೂ ಕಸವನ್ನು ಸಂಗ್ರಹಿಸಿ ತರಲಿದೆ.

ಪ್ರತಿಕ್ರಿಯಿಸಿ (+)