ಶುಕ್ರವಾರ, ಡಿಸೆಂಬರ್ 6, 2019
25 °C

ಬರಿಗೈಯಿಂದ ಶೌಚಾಲಯ ಶುಚಿಗೊಳಿಸಿದ ಸಂಸದ

ಪಿಟಿಐ Updated:

ಅಕ್ಷರ ಗಾತ್ರ : | |

ಬರಿಗೈಯಿಂದ ಶೌಚಾಲಯ ಶುಚಿಗೊಳಿಸಿದ ಸಂಸದ

ನವದೆಹಲಿ: ಮಧ್ಯಪ್ರದೇಶದ ಬಿಜೆಪಿ ಸಂಸದ ಜನಾರ್ದನ ಮಿಶ್ರಾ, ಶಾಲೆಯೊಂದರ ಶೌಚಾಲಯವನ್ನು ಬರಿಗೈಲಿ ಶುಚಿ ಮಾಡಿದ್ದು, ಇದರ ವಿಡಿಯೊ ವೈರಲ್‌ ಆಗಿದೆ.

ಕಳೆದ ವಾರ  ಇವರು ತಮ್ಮ ಕ್ಷೇತ್ರ ರೇವಾದ ಶಾಲೆಯೊಂದಕ್ಕೆ ಭೇಟಿ ನೀಡಿದ್ದರು. ಶಾಲೆಯಲ್ಲಿ ವಿದ್ಯಾರ್ಥಿಗಳು ಶೌಚಾಲಯವನ್ನು ಬಳಸದೇ ಹೊರಗಡೆ ಹೋಗಿದ್ದು ಕಂಡುಬಂದಿತ್ತು. ಇದರಿಂದ ಕೋಪಗೊಂಡ ಅವರು ಶಾಲೆಯ ಶೌಚಾಲಯಗಳಿಗೆ ಹೋಗಿ ಪರಿಶೀಲಿಸಿದಾಗ ಅದು ತುಂಬಾ ಕೊಳಕಿನಿಂದ ಕೂಡಿದ್ದು ಕಾಣಿಸಿತು.

ಶಾಲೆಯವರು ಶೌಚಾಲಯವನ್ನು ಸರಿಯಾಗಿ ನಿರ್ವಹಣೆ ಮಾಡದ್ದನ್ನು ಕಂಡು ಅಸಮಾಧಾನಗೊಂಡ ಅವರು, ಖುದ್ದಾಗಿ ಶುಚಿ ಮಾಡಲು ಮುಂದಾದರು. ಎಡಗೈ ಮೂಲಕ ಬರಿಗೈಯಿಂದ ಅಲ್ಲಿ ಇದ್ದ ಕಸಕಡ್ಡಿಗಳನ್ನು ತೆಗೆದರು.

ಇದನ್ನು ಸಾಮಾಜಿಕ ಜಾಲತಾಣದಲ್ಲಿ ಅಪಲೋಡ್‌ ಮಾಡಿದ ಕೆಲವೇ ಗಂಟೆಗಳಲ್ಲಿ 1,600 ಸಲ ರೀಟ್ವೀಟ್‌ ಮಾಡಲಾಗಿದೆ. 3ಸಾವಿರಕ್ಕೂ ಅಧಿಕ ಮೆಚ್ಚುಗೆ (ಲೈಕ್‌) ಬಂದಿದ್ದು, 30ಸಾವಿರಕ್ಕೂ ಅಧಿಕ ಮಂದಿ ಈ ವಿಡಿಯೊ ವೀಕ್ಷಿಸಿದ್ದಾರೆ.

ಪ್ರತಿಕ್ರಿಯಿಸಿ (+)