ಕಾನೂನು ತಜ್ಞರ ಜೊತೆ ಚರ್ಚಿಸಿ ನಿರ್ಧಾರ: ಸಿ.ಎಂ

7

ಕಾನೂನು ತಜ್ಞರ ಜೊತೆ ಚರ್ಚಿಸಿ ನಿರ್ಧಾರ: ಸಿ.ಎಂ

Published:
Updated:

ಸೇಲಂ, ತಮಿಳುನಾಡು: ತಮಿಳುನಾಡಿಗೆ ಕಾವೇರಿ ನದಿ ನೀರು ಹಂಚಿಕೆಯನ್ನು ಕಡಿತಗೊಳಿಸಿರುವ ಸುಪ್ರೀಂಕೋರ್ಟ್‌ ತೀರ್ಪಿನ ಕುರಿತಾಗಿ ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಹೇಳಿದ್ದಾರೆ.

ಕೋರ್ಟ್‌ ತೀರ್ಪಿನ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ‘ನೀರು ಕಡಿತಗೊಳಿಸಿರುವ ತೀರ್ಪು ಕುರಿತು ನಮಗೆ ತುಂಬಾ ನಿರಾಸೆಯಾಗಿರು

ವುದು ನಿಜ. ಆದರೆ ಕಾವೇರಿ ನದಿಯ ಮೇಲೆ ಎರಡೂ ರಾಜ್ಯಗಳು ಹಕ್ಕನ್ನು ಸಾಧಿಸಬಾರದು ಎಂದು ಕೋರ್ಟ್‌ ಹೇಳಿರುವುದು ತುಂಬಾ ಖುಷಿ ತಂದಿದೆ’ ಎಂದು ಅವರು ಹೇಳಿದರು.

ನೀರು ಹಂಚಿಕೆ ಸರಿಯಾಗಲಿ: ಸುಪ್ರೀಂಕೋರ್ಟ್‌ ತೀರ್ಪಿನಂತೆ ತಮಿಳುನಾಡಿಗೆ ಸರಿ ಪ್ರಮಾಣದ ನೀರು ಹಂಚಿಕೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಿಪಿಐ ಮುಖಂಡ ಡಿ.ಪಾಂಡಿಯನ್‌ ಆಗ್ರಹಿಸಿದ್ದಾರೆ. ‘ನಾವು ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ. ಕರ್ನಾಟಕ ಕೂಡ ಕೋರ್ಟ್‌ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry