ಮಧ್ಯಪ್ರದೇಶ: ನಾಳೆಯಿಂದ ಖಜರಾಹೊ ನೃತ್ಯೋತ್ಸವ

5

ಮಧ್ಯಪ್ರದೇಶ: ನಾಳೆಯಿಂದ ಖಜರಾಹೊ ನೃತ್ಯೋತ್ಸವ

Published:
Updated:

ಭೋಪಾಲ್‌: ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ದೇವಾಲಯಗಳ ನಗರಿ ಖಜರಾಹೊದಲ್ಲಿ ಫೆಬ್ರುವರಿ 20ರಿಂದ 26ರ ವರೆಗೆ ನೃತ್ಯೋತ್ಸವ ನಡೆಯಲಿದೆ.

‘ನೃತ್ಯೋತ್ಸವದಲ್ಲಿ ಶಾಸ್ತ್ರೀಯ ನೃತ್ಯ ಪ್ರಕಾರಗಳಾದ ಕಥಕ್‌, ಒಡಿಸ್ಸಿ, ಭರತನಾಟ್ಯ, ಕೂಚಿಪುಡಿ, ಕಥಕ್ಕಳಿ, ಮೋಹಿನಿಯಾಟ್ಟಂ  ಪ್ರದರ್ಶನಗೊಳ್ಳಲಿವೆ’ ಎಂದು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

‘45 ವರ್ಷಗಳಿಂದ ನೃತ್ಯೋತ್ಸವ ನಡೆಯುತ್ತಿದ್ದು, ಈ ಬಾರಿ ಆಧುನಿಕ ನೃತ್ಯ ಪ್ರಕಾರಗಳಿಗೂ ಅವಕಾಶ ನೀಡಲಾಗಿದೆ’ ಎಂದಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ನಡೆಯುವ ಚಿತ್ರಕಲಾ ಪ್ರದರ್ಶನದಲ್ಲಿ ಜರ್ಮನಿ, ಫ್ರಾನ್ಸ್‌, ಚೀನಾ ಸೇರಿದಂತೆ ವಿವಿಧ ದೇಶಗಳ ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ’ ಎಂದೂ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry