ವಾಹನ ಡಿಕ್ಕಿ: ಚಿರತೆ ಸಾವು

7

ವಾಹನ ಡಿಕ್ಕಿ: ಚಿರತೆ ಸಾವು

Published:
Updated:

ಮಾಗಡಿ: ತಾಲ್ಲೂಕಿನ‌ ನಾರಾಯಣಿ ಪಾಳ್ಯದ ಬಳಿ ಶನಿವಾರ ರಾತ್ರಿ ವಾಹನ ಡಿಕ್ಕಿ ಹೊಡೆದು ಚಿರತೆ ಮೃತಪಟ್ಟಿದೆ.

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ಘಟನೆ ನಡೆಯಿತು. ರಸ್ತೆ ದಾಟುವ ಧಾವಂತದಲ್ಲಿ ಚಿರತೆ ವಾಹನಕ್ಕೆ ಸಿಲುಕಿ‌ ಮೃತಪಟ್ಟಿತು.

ಐದು ವರ್ಷದ ಹೆಣ್ಣು ಚಿರತೆ ಇದಾಗಿದೆ. ಶವಪರೀಕ್ಷೆಯ ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ಅಂತ್ಯಸಂಸ್ಕಾರ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry