ಎಫ್‌ಬಿಐ ಟೀಕಿಸಿದ ಟ್ರಂಪ್‌

7

ಎಫ್‌ಬಿಐ ಟೀಕಿಸಿದ ಟ್ರಂಪ್‌

Published:
Updated:

ವೆಸ್ಟ್‌ ಪಾಲ್ಮ್ ಬೀಚ್‌ (ಎಪಿ): ಪಾರ್ಕ್‌ಲ್ಯಾಂಡ್‌ ಶಾಲೆಯಲ್ಲಿ ನಡೆದಿರುವ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಎಫ್‌ಬಿಐ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸುತ್ತಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರೋಪಿಸಿದ್ದಾರೆ.

ದಾಳಿಯಿಂದ ತೊಂದರೆಗೊಳಗಾದ ಜನರಿಂದ ಬಂದ ಟೀಕೆಗಳಿಗೆ ಪ್ರತ್ಯುತ್ತರವಾಗಿ ಟ್ರಂಪ್‌ ಈ ಹೇಳಿಕೆ ನೀಡಿದ್ದಾರೆ. ದಾಳಿ ನಡೆಯುವ ಬಗ್ಗೆ ತಿಂಗಳ ಹಿಂದೆ ಸೂಚನೆ ಸಿಕ್ಕಿದ್ದರೂ ಅದನ್ನು ತಡೆಯುವಲ್ಲಿ ಎಫ್‌ಬಿಐ ವಿಫಲವಾಗಿದೆ ಎಂದು ಹೇಳಿದ್ದಾರೆ.

‘ಇದನ್ನು ಒಪ್ಪಿಕೊಳ್ಳಲಾಗದು. ರಷ್ಯಾದೊಂದಿಗಿನ ಒಪ್ಪಂದವನ್ನು ಸಾಬೀತುಪಡಿಸಲು ಅವರು ಹೆಚ್ಚಿನ ಸಮಯವನ್ನು ವ್ಯಯ ಮಾಡುತ್ತಿದ್ದಾರೆ. ಅಂತಹ ಯಾವುದೇ ಒಪ್ಪಂದ ಏರ್ಪಟ್ಟಿಲ್ಲ. ಮೂಲಕ್ಕೆ ಮರಳಿ, ಎಲ್ಲರೂ ಮೆಚ್ಚುವಂತೆ ಕೆಲಸ ಮಾಡಿ’ ಎಂದು ಶನಿವಾರ ರಾತ್ರಿ ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

ನ್ಯಾಷನಲ್‌ ರೈಫಲ್‌ ಅಸೋಸಿಯೇಷನ್‌ ಜೊತೆಗಿನ ಟ್ರಂಪ್‌ ಅವರ ಒಪ್ಪಂದವನ್ನು ವಿರೋಧಿಸಿ ಸಾವಿರಾರು ಮಂದಿ ಫ್ಲಾರಿಡಾದಲ್ಲಿ ಪ್ರತಿಭಟನೆ ನಡೆಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry