ಸೋಮವಾರ, ಡಿಸೆಂಬರ್ 9, 2019
25 °C

ಶಿವರಾಮ ಕಾರಂತನಗರ: ಕಾವೇರಿ ನೀರು ಸರಬರಾಜಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವರಾಮ ಕಾರಂತನಗರ: ಕಾವೇರಿ ನೀರು ಸರಬರಾಜಿಗೆ ಚಾಲನೆ

ಬೆಂಗಳೂರು: ಬ್ಯಾಟರಾಯನಪುರ ಕ್ಷೇತ್ರದ ಎಂಸಿಇಸಿಎಚ್ಎಸ್ ಬಡಾವಣೆ ಹಾಗೂ ಶಿವರಾಮ ಕಾರಂತ ನಗರ 2ನೇ ಹಂತದಲ್ಲಿ ಕಾವೇರಿ ನೀರು ಸರಬರಾಜಿಗೆ ಕೃಷಿ ಸಚಿವ ಕೃಷ್ಣ ಬೈರೇಗೌಡ ಭಾನುವಾರ ಚಾಲನೆ ನೀಡಿದರು.

ಇದೇ ವೇಳೆ ₹70 ಲಕ್ಷ ವೆಚ್ಚದಲ್ಲಿ ಹೊಸ ಉದ್ಯಾನದ ಅಭಿವೃದ್ಧಿ ಹಾಗೂ ₹35 ಲಕ್ಷ ವೆಚ್ಚದಲ್ಲಿ ಮೂರು ಮುಖ್ಯರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು.

ಬಡಾವಣೆಯಲ್ಲಿ ಸಾಕಷ್ಟು ಕೊಳವೆ ಬಾವಿಗಳನ್ನು ಕೊರೆಸಿದ್ದರೂ ನೀರು ಸಿಕ್ಕಿರಲಿಲ್ಲ. ಇದರಿಂದ ನಾಗರಿಕರಿಗೆ ನೀರಿನ ಸಮಸ್ಯೆ ಉಂಟಾಗಿತ್ತು. ಈಗ 200ಕ್ಕೂ ಹೆಚ್ಚು ಮನೆಗಳಿಗೆ ಕಾವೇರಿ ನೀರು ಪೂರೈಸಲಾಗುತ್ತದೆ ಎಂದರು.

ಶ್ರೀರಾಮಪುರದ ರೈಲ್ವೆ ಕ್ರಾಸಿಂಗ್ ಬಳಿ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ₹17 ಕೋಟಿ ವೆಚ್ಚದಲ್ಲಿ ಕೆಳಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ. ನಾಲ್ಕು ತಿಂಗಳೊಳಗೆ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.

ಬಡಾವಣೆಯಲ್ಲಿ ರಾಜಕಾಲುವೆಯಲ್ಲಿ ತಡೆಗೋಡೆ ನಿರ್ಮಿಸಬೇಕು ಎಂದು ಬಿಡಿಎಗೆ ಪತ್ರ ಬರೆಯಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುತ್ತದೆ ಎಂದರು.

ಪ್ರತಿಕ್ರಿಯಿಸಿ (+)