ಶುಕ್ರವಾರ, ಡಿಸೆಂಬರ್ 13, 2019
27 °C

ರಜನಿ ಭೇಟಿ ಮಾಡಿದ ಕಮಲ್‌

ಪಿಟಿಐ Updated:

ಅಕ್ಷರ ಗಾತ್ರ : | |

ರಜನಿ ಭೇಟಿ ಮಾಡಿದ ಕಮಲ್‌

ಚೆನ್ನೈ(ಪಿಟಿಐ):  ತಮ್ಮ ರಾಜಕೀಯ ಪ್ರವೇಶಕ್ಕೆ ಇನ್ನು ಕೆಲವೇ ದಿನ ಇರುವಾಗ ನಟ ಕಮಲ್ ಹಾಸನ್ ಅವರು ನಟ ರಜನಿಕಾಂತ್ ಅವರನ್ನು ಭಾನುವಾರ ಭೇಟಿ ಮಾಡಿ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ’ಇದೇ 21ರಂದು ಪಕ್ಷ ಉದ್ಘಾಟನೆಗೊಳ್ಳಲಿದ್ದು, ನನಗೆ ಯಾರು ಇಷ್ಟವೋ ಅವರನ್ನು ಭೇಟಿಯಾಗುತ್ತಿದ್ದೇನೆ’ ಎಂದಿದ್ದಾರೆ.

‘ನನ್ನ ಗೆಳೆಯ ಕಮಲ್‌ ಹಾಸನ್‌  ಭವಿಷ್ಯ ಉಜ್ವಲವಾಗಲಿ. ತಮಿಳುನಾಡಿನ ಜನತೆಯ ಸೇವೆಗಾಗಿ ಕಮಲ್‌ ಮುಂದಾಗಿದ್ದಾರೆ. ಹಣ ಅಥವಾ ಖ್ಯಾತಿಗಾಗಿ ಅವರು ರಾಜಕೀಯ ಪ್ರವೇಶಿಸಿಲ್ಲ. ರಾಜ್ಯದ ಜನರ ಸೇವೆ ಮಾಡುವ ಉದ್ದೇಶವಿರುವ ಅವರಿಗೆ ಯಶಸ್ಸು ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ರಜನಿಕಾಂತ್ ಪ್ರತಿಕ್ರಿಯಿಸಿದರು.

‘ಸಿನಿಮಾದಲ್ಲಿ ನಮ್ಮಿಬ್ಬರದ್ದೂ ವಿಭಿನ್ನ ಶೈಲಿ’ ಎಂದು ರಜನೀಕಾಂತ್‌ ಹೇಳುವ ಮೂಲಕ ರಾಜಕೀಯದಲ್ಲಿಯೂ ಪ್ರತ್ಯೇಕವಾಗುವ ಸೂಚನೆಯನ್ನು ನೀಡಿದರು.

‘ಇದು ರಾಜಕೀಯ ಭೇಟಿಯಲ್ಲ. ನನ್ನ ರಾಜಕೀಯ ಹಾದಿಯ ಕುರಿತು ತಿಳಿಸಲು ಈ ಭೇಟಿ. ಈ ಹಿಂದೆ ಕೂಡ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಮಾಜಿ ಚುನಾವಣಾ ಆಯುಕ್ತ ಟಿ.ಎನ್‌.ಶೇಷನ್‌ ಸೇರಿದಂತೆ ಅನೇಕ ಮುಖಂಡರನ್ನು ಭೇಟಿಯಾಗಿದ್ದೇನೆ’ ಎಂದು ಹೇಳಿದರು.

ರಾಜಕೀಯ ಮೈತ್ರಿ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ, ‘ಕಾಲವೇ ಅದಕ್ಕೆ ಉತ್ತರಿಸಬೇಕು’ ಎಂದರು.

ಕಳೆದ ವಾರ ಹಾರ್ವಡ್ ವಿಶ್ವ ವಿದ್ಯಾಲಯದ ಭಾಷಣ ವೇಳೆ ತಮಿಳುನಾಡಿನ ರಾಜಕೀಯ ಹಾಗೂ ರಜನಿಕಾಂತ್ ಅವರ ಉದ್ದೇಶಿತ ಪಕ್ಷದ ಬಗ್ಗೆ ಮಾತನಾಡುತ್ತಾ, ರಜನಿ ಅವರ ಪಕ್ಷದ ಬಣ್ಣ ಕೇಸರಿಯಲ್ಲ ಎಂದುಕೊಂಡಿದ್ದೇನೆ. ಅದು ಕೇಸರಿಯಾದರೆ(ಬಿಜೆಪಿ ಜತೆ ಕೈಜೋಡಿಸಿದರೆ) ಜತೆ ಮೈತ್ರಿ ಸಾಧ್ಯವಿಲ್ಲ ಎಂದು ಕಮಲ್ ಹೇಳಿದ್ದರು.

ಪ್ರತಿಕ್ರಿಯಿಸಿ (+)