ಸೋಮವಾರ, ಡಿಸೆಂಬರ್ 9, 2019
22 °C

ದೀಪಿಕಾ, ಕತ್ರಿನಾ ಜೊತೆ ಕೆಲಸಕ್ಕೆ ಅಮಿತಾಭ್‌ ಅರ್ಜಿ!

ಪಿಟಿಐ Updated:

ಅಕ್ಷರ ಗಾತ್ರ : | |

ದೀಪಿಕಾ, ಕತ್ರಿನಾ ಜೊತೆ ಕೆಲಸಕ್ಕೆ ಅಮಿತಾಭ್‌  ಅರ್ಜಿ!

ಮುಂಬೈ (ಪಿಟಿಐ): ಟ್ವಿಟರ್‌ನಲ್ಲಿ ಹಾಸ್ಯ ಚಟಾಕಿ ಹಾರಿಸುವುದರ ಮೂಲಕ ಅಭಿಮಾನಿಗಳ ಗಮನಸೆಳೆಯುತ್ತಿರುವ ಹಿರಿಯ ನಟ ಅಮಿತಾಭ್ ಬಚ್ಚನ್‌ ತಮ್ಮ ಹೆಸರಿನಲ್ಲಿ ಕೆಲಸದ ಅರ್ಜಿಯೊಂದನ್ನು ಶೇರ್‌ ಮಾಡಿದ್ದಾರೆ. ಅದರಲ್ಲಿ ‘ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್‌ ಅವರ ಜೊತೆ ನಟಿಸಲು ಸೂಕ್ತ ವ್ಯಕ್ತಿ ಅಮಿತಾಭ್. ಅವರ ಎತ್ತರಕ್ಕೆ ಧನ್ಯವಾದ’ ಎಂಬ ಒಕ್ಕಣೆಯಿದೆ. 

‘ದೀಪಿಕಾ ಮತ್ತು ಕತ್ರಿನಾ ಅವರನ್ನು ಶಾಹಿದ್‌ ಕಪೂರ್‌ ಮತ್ತು ಅಮೀರ್‌ ಖಾನ್‌ ಅವರ ಜೋಡಿಯಾಗಿಸುವುದು ನಿರ್ಮಾಪಕರಿಗೆ ಕಷ್ಟ’ ಎಂಬ ಈ ಕುರಿತು ಪತ್ರಿಕೆಯಲ್ಲಿ ಬಂದಿರುವ ಸುದ್ದಿಯ ತುಣಕನ್ನು ಲಗತ್ತಿಸಿ ಅವರು  ಈ ಟ್ವೀಟ್‌ ಮಾಡಿದ್ದಾರೆ.

ಹೆಸರು: ಅಮಿತಾಭ್ ಬಚ್ಚನ್‌,. ಜನ್ಮ ದಿನಾಂಕ:11.10.1942,ಅಲಹಾಬಾದ್‌. ವಯಸ್ಸು:76ವರ್ಷ. ಸಿನಿಮಾ:200ಕ್ಕೂ ಹೆಚ್ಚು. ಭಾಷೆ: ಹಿಂದಿ, ಇಂಗ್ಲಿಷ್‌, ಪಂಜಾಬಿ, ಬೆಂಗಾಲಿ. ಎತ್ತರ: 6.2 ಅಡಿ. ನಾಯಕಿ ಎದುರು ಎತ್ತರದ ಸಮಸ್ಯೆ ನಿಮಗೆ ಯಾವತ್ತೂ ಎದುರಾಗದು’ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)